ಅಶ್ಲೀಲ ಚಿತ್ರ ನಿಷೇಧ: ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!

ನವದೆಹಲಿ: ಅಶ್ಲೀಲ ಚಿತ್ರಗಳ (ಪೋನೋಗ್ರಫಿ-ನೀಲಿ ಚಿತ್ರ) ಮೇಲೆ ನಿಷೇಧ ಕೋರಿ ಸಲ್ಲಿಸಿರುವ ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಸಕ್ತಿ ತೋರಿದೆ. ಆದರೂ ನಾಲ್ಕು ವಾರಗಳ ನಂತರ ಅದನ್ನು ಪರಿಶೀಲಿಸುವುದಾಗಿ ಹೇಳಿದೆ.

ಭ್ರಷ್ಟ ಆಡಳಿತವನ್ನು ಕಿತ್ತೊಗೆಯಲು ಸೆಪ್ಟೆಂಬರ್​ನಲ್ಲಿ ಯುವಜನರು ನಡೆಸಿದ ಜನ್ ಝುಡ್ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ಪೀಠ, ‘ನಿಷೇಧವೊಂದರ ಸಂಬಂಧ ನೇಪಾಳದಲ್ಲಿ ಏನು ನಡೆಯಿತು ಎನ್ನುವುದನ್ನು ನೋಡಿ’ ಎಂದು ಅರ್ಜಿದಾರರಿಗೆ ಹೇಳಿತು.

ವಿಶೇಷವಾಗಿ ಪ್ರಾಪ್ತ ವಯಸ್ಸು ತಲುಪದವರು ಸಾರ್ವಜನಿಕ ಸ್ಥಳದಲ್ಲಿ ನೀಲಿ ಚಿತ್ರ ವೀಕ್ಷಿಸುವುದನ್ನು ನಿರ್ಬಂಧಿಸಲು ಒಂದು ರಾಷ್ಟ್ರೀಯ ನೀತಿ ಹಾಗೂ ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ಅರ್ಜಿದಾರರು ಕೋರಿದ್ದರು.