ಇದೀಗ ಎಟಿಎಂನಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಯುಪಿಐ ಬಳಸಿ ನೇರವಾಗಿ ಎಟಿಎಂನಲ್ಲೇ ಹಣ ತೆಗೆಯಬಹುದು. ದೇಶದ ಅನೇಕ ಬ್ಯಾಂಕುಗಳು ಈಗ ಯುಪಿಐ ಕಾರ್ಡ್ಲೆಸ್ ಕ್ಯಾಶ್ ವಿತ್ಡ್ರಾವಲ್ ಸೌಲಭ್ಯವನ್ನು ನೀಡಿವೆ. ಕಾರ್ಡ್ ಮರೆತರೂ ಅಥವಾ ಕಳೆದುಕೊಂಡರೂ ಚಿಂತೆಯೇ ಇಲ್ಲ.
ಈ ವಿಧಾನ ಏಕೆ ಉಪಯುಕ್ತ?
- ಕಾರ್ಡ್ ಬಳಕೆ ಇಲ್ಲದಿರುವುದರಿಂದ ಕಾರ್ಡ್ ಕಳ್ಳತನ ಅಥವಾ ಕ್ಲೋನಿಂಗ್ ಭಯ ಕಡಿಮೆ.
- ಸರಳ ಮತ್ತು ವೇಗವಾದ ಪ್ರಕ್ರಿಯೆ.
- ಮೊಬೈಲ್ ಮತ್ತು UPI ಆಪ್ ಇದ್ದರೆ ಸಾಕು.
ಹಣ ತೆಗೆಯುವ ವಿಧಾನ
1. UPI ಬೆಂಬಲಿತ ATM ಗೆ ಹೋಗಿ.
2. ಪರದೆ ಮೇಲೆ “UPI Cash Withdrawal” ಅಥವಾ “ICCW” ಎಂಬ ಆಯ್ಕೆಯನ್ನು ಆರಿಸಿ.
3. ನೀವು ತೆಗೆದುಕೊಳ್ಳಬೇಕಾದ ಮೊತ್ತವನ್ನು ನಮೂದಿಸಿ.
4. ATM ತೋರಿಸುವ QR ಕೋಡ್ ಅನ್ನು ನಿಮ್ಮ PhonePe / Google Pay / BHIM / Paytm ಆಪ್ ಮೂಲಕ ಸ್ಕ್ಯಾನ್ ಮಾಡಿ.
5. ನಿಮ್ಮ UPI ಪಿನ್ ಹಾಕಿ.
6. ಹಣ ತಕ್ಷಣ ಬರುತ್ತದೆ.
ಒಂದೇ ಬಾರಿ ₹100 ರಿಂದ ₹10,000 ವರೆಗೆ ಹಣ ತೆಗೆಯಬಹುದು. ಸದ್ಯ ಎಲ್ಲಾ ATMಗಳಲ್ಲಿ ಇದು ಇನ್ನೂ ದೊರೆಯುವುದಿಲ್ಲ. ICCW ಸಕ್ರಿಯಗೊಂಡ ATMಗಳಲ್ಲಿ ಮಾತ್ರ ಲಭ್ಯ.


















