ಅಫ್ಘಾನಿಸ್ತಾನ: ಉತ್ತರ ಅಫ್ಘಾನಿಸ್ತಾನದ ಮಜಾರ್-ಎ-ಶರೀಫ್ ನಗರದ ಬಳಿ ಇಂದು(ನ. 03) ಮುಂಜಾನೆ 6.3 ತೀವ್ರತೆಯ ಭಾರಿ ಭೂಕಂಪನ(Earthquake) ಸಂಭವಿಸಿದ್ದು, ಕನಿಷ್ಠ 7 ಜನ ಮೃತಪಟ್ಟಿದ್ದು, ಸುಮಾರು 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಜಾರ್-ಎ ಶರೀಫ್ ಬಳಿಯ ಉತ್ತರ ಪ್ರಾಂತ್ಯಯದ ಸಮಂಗನ್ ಆರೋಗ್ಯ ಇಲಾಖೆ ವಕ್ತಾರ ಸಮೀಮ್ ಜೋಯಂಡಾ ರಾಯಿಟರ್ಸ್ ಜೊತೆ ಮಾತನಾಡಿದ್ದು, ಇಂದು ಬೆಳಿಗ್ಗೆ ಸಂಭವಿಸಿದ ಭೂಕಂಪನದಲ್ಲಿ ಒಟ್ಟು 150 ಜನರು ಗಾಯಗೊಂಡಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೂ ಭೂಕಂಪನದ ಕೇಂದ್ರ ಬಿಂದು ಸುಮಾರು 5,23,000 ಜನಸಂಖ್ಯೆಯನ್ನು ಹೊಂದಿರುವ ಮಜಾರ್-ಎ ಶರೀಫ್ ನಗರದ ಬಳಿ 28 ಕಿಮೀ ಆಳದಲ್ಲಿದೆ ಎಂದು ಯುಸ್ಜಿಎಸ್ ಮಾಹಿತಿ ನೀಡಿದೆ.


















