ಮೂಡ್ಲಕಟ್ಟೆ: ಶತ ಕಂಠ ಗಾಯನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘ ಹಾಗೂ ಯೂತ್ ವಿಂಗ್ ತಂಡದ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಶತ ಕಂಠ ಗಾಯನ – ಕನ್ನಡ ಗೀತೆಗಳ ಭಾವ ಯಾನ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕನ್ನಡಾಂಬೆಗೆ ಕರ್ನಾಟಕ ಬಾವುಟವನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕನ್ನಡ ಗೀತೆಗಳಲ್ಲಿ ಪ್ರಸಿದ್ದಿ ಪಡೆದ ಹಚ್ಚೇವು ಕನ್ನಡದ ದೀಪ, ಜೋಗದ ಸಿರಿ ಬೆಳಕಿನಲ್ಲಿ, ಜಯ ಭಾರತ ಜನನಿಯ ,ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಇತ್ಯಾದಿ ಹಾಡುಗಳು ನೂರು ವಿದ್ಯಾರ್ಥಿಗಳ ಕಂಠದಲ್ಲಿ ಸುಶ್ರಾವ್ಯವಾಗಿ ಮೊಳಗಿತು.
ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮಕೃಷ್ಣ ಹೆಗ್ಡೆ ಅವರು ಕನ್ನಡ ನಾಡುನುಡಿಯ ವಿಶೇಷತೆಯ ಬಗ್ಗೆ ವಿವರಿಸುತ್ತ ವಿದ್ಯಾರ್ಥಿಗಳು ಕನ್ನಡ ಪ್ರೇಮವನ್ನು ಸದಾಕಾಲ ಉಳಿಸಿಕೊಳ್ಳಬೇಕೆಂದು ಆಶಿಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ ಮೆಲ್ವಿನ್ ಡಿ ಸೋಜ, ವಿಭಾಗದ ಮುಖ್ಯಸ್ಠರು, ಸಂಯೋಜಕರಾದ ಸೂಕ್ಷ್ಮ ಅಡಿಗ, ಆಶಾ ಕುಮಾರಿ, ಚೈತ್ರ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಂಪ್ಯುಟರ್ ಸೈನ್ಸ್ ತೃತೀಯ ವರ್ಷದ ವಿದ್ಯಾರ್ಥಿನಿಯರಾದ ಕರುಣ ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.


















