ಐಸ್ ಕ್ರೀಮ್ ಎಲ್ಲರಿಗೂ ಇಷ್ಟವಾಗುವ ತಣ್ಣನೆಯ ಸಿಹಿತಿಂಡಿ. ಆದರೆ ಮಧುಮೇಹ ಇರುವವರು ಅದನ್ನು ತಿನ್ನುವುದಕ್ಕೆ ಸಂದೇಹಪಡುತ್ತಾರೆ. ಏಕೆಂದರೆ ಐಸ್ ಕ್ರೀಂನಲ್ಲಿರುವ ಸಕ್ಕರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಬೇಗನೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುವ ಭಯದಲ್ಲಿ. ಆದರೆ ಅವರು ನಿಜವಾಗಲೂ ಐಸ್ ಕ್ರೀಂ ತಿನ್ನಬಹುದೇ ತಿನ್ನಬಾರದೇ ಏನೆಂಬುದನ್ನು ನೋಡೋಣ.
ಇಷ್ಟು ಗೊತ್ತಿರಲಿ:
ಐಸ್ ಕ್ರೀಂನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಗ್ಲೂಕೋಸ್‌ಗೆ ತಿರುಗುತ್ತವೆ. ಸಾಮಾನ್ಯವಾಗಿ ಇನ್ಸುಲಿನ್ ಗ್ಲೂಕೋಸ್ ಅನ್ನು ದೇಹದ ಕೋಶಗಳಿಗೆ ತೆಗೆದುಕೊಂಡು ಹೋಗುತ್ತವೆ. ಆದರೆ ಮಧುಮೇಹ ಇರುವವರಲ್ಲಿ ಈ ಪ್ರಕ್ರಿಯೆ ನಿಧಾನವಾಗಿರುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಏರಬಹುದು. ಆದರೆ, ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ ಈ ಏರಿಕೆ ನಿಯಂತ್ರಣದಲ್ಲಿ ಇರುತ್ತದೆ.

ಮಧುಮೇಹಿಗಳಿಗೆ ಯಾವ ರೀತಿಯ ಐಸ್ ಕ್ರೀಮ್ ಬೆಸ್ಟ್?
ಐಸ್ ಕ್ರೀಮ್ ಆಯ್ಕೆ ಮಾಡುವಾಗ ಲೇಬಲ್ ನೋಡಿ ಈ ಅಂಶಗಳನ್ನು ಗಮನಿಸಿ:
ಪರಿಶೀಲಿಸಬೇಕಾದ ಅಂಶ, ಮಿತಿಯ ಪ್ರಮಾಣ: ಕಾರ್ಬೋಹೈಡ್ರೇಟ್ ಪ್ರತಿ ಸರ್ವಿಂಗ್‌ಗೂ 30 ಗ್ರಾಂಗಿಂತ ಕಡಿಮೆ, ಸಕ್ಕರೆ 13 ಗ್ರಾಂಗಿಂತ ಕಡಿಮೆ, ಕ್ಯಾಲೊರಿ 250 ಕ್ಯಾಲೊರಿಗಳಿಗಿಂತ ಕಡಿಮೆ, ಬಿಳಿ ಸಕ್ಕರೆ ಬದಲಿಗೆ ಸ್ಟೀವಿಯಾ, ಎರಿಥ್ರಿಟಾಲ್ ಅಥವಾ ಮಾಂಕ್ ಫ್ರೂಟ್ ಸಿಹಿಕಾರಕಗಳನ್ನು ಬಳಸಿ ತಯಾರಿಸಿದ ಐಸ್ ಕ್ರೀಂ ಆಯ್ಕೆಮಾಡುವುದು ಉತ್ತಮ.
ಐಸ್ ಕ್ರೀಮ್ ತಿನ್ನಬೇಕೇದರೆ ಸಲಹೆಗಳು:
ಕಡಿಮೆ ಪ್ರಮಾಣದಲ್ಲಿ ಮಾತ್ರ ತಿನ್ನಿ. ಐಸ್ ಕ್ರೀಮ್ ಜೊತೆ ಬಾದಾಮಿ, ಅಕ್ರೋಟ್, ಚಿಯಾ ಬೀಜಗಳು ಹೀಗೆ ಫೈಬರ್ ಮತ್ತು ಪ್ರೋಟೀನ್ ಇರುವ ಆಹಾರ ಸೇರಿಸಿ. ಸಾಯಂಕಾಲ ಅಥವಾ ರಾತ್ರಿ ತುಂಬಾ ತಡವಾಗಿ ಐಸ್ ಕ್ರೀಂ ತಿನ್ನುವುದನ್ನು ತಪ್ಪಿಸಿ. ತಿಂದ ನಂತರ ಸ್ವಲ್ಪ ನಡೆದು ಬನ್ನಿ ಇದು ಸಕ್ಕರೆಯ ಏರಿಕೆಯನ್ನು ನಿಯಂತ್ರಿಸುತ್ತದೆ.
ಕೊನೆಯದಾಗಿ:
ಮಧುಮೇಹ ಇರುವವರು ಐಸ್ ಕ್ರೀಮ್ ತಿನ್ನಬಾರದು ಎಂಬುದು ತಪ್ಪು ಕಲ್ಪನೆ. ಸಮತೋಲನ + ನಿಯಮಿತ ಪ್ರಮಾಣ + ಸರಿಯಾದ ಐಸ್ ಕ್ರೀಂ ಆಯ್ಕೆ → ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುತ್ತಾ ಐಸ್ ಕ್ರೀಮ್ ರುಚಿಯನ್ನು ಅನುಭವಿಸಬಹುದು.
















