ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾ ವಿದ್ಯಾಲಯವು ಉಡುಪಿ ಜಿಲ್ಲಾ ಖಾಸಗಿ ಅನುದಾನಿತ ಮತ್ತು
ಅನುದಾನರಹಿತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರ ಸಂಘದ
ಸಹಯೋಗದೊಂದಿಗೆ ದಿನಾಂಕ 28 ಅಕ್ಟೋಬರ್ 2025 ರಂದು
“ಭವಿಷ್ಯ ರೂಪಿಸುವಲ್ಲಿ ಪ್ರೇರಣಾದಾಯಕ ಶಿಕ್ಷಕರು” ಎಂಬ
ವಿಷಯದಡಿ ಒಂದು ದಿನದ ಪದವಿ ಪೂರ್ವ ಶಿಕ್ಷಕರ ಅಭಿವೃದ್ಧಿ
ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉಡುಪಿಯ ಪದವಿಪೂರ್ವ ಶಿಕ್ಷಣ ಇಲಾಖೆಯ
ಉಪನಿರ್ದೇಶಕರಾದ ಶ್ರೀ ಮಾರುತಿ ಮಾಲ್ಗೆ ಉದ್ಘಾಟಿಸಿದರು. ಇವರು
ಮಾತನಾಡಿ ವಿದ್ಯಾರ್ಥಿಗಳನ್ನು ಸದೃಢ ನಾಗರೀಕರನ್ನಾಗಿ ರೂಪಿಸಲು
ಶಿಕ್ಷಕರನ್ನು ಕೃತಕ ಬುದ್ಧಿಮತ್ತೆ ಮತ್ತು ಸಮಾಲೋಚನ
ಸಾಧನಗಳೊಂದಿಗೆ ಸಬಲೀಕರಣಗೊಳಿಸುವ ಮಹತ್ವವನ್ನು
ತಿಳಿಸಿದರು.
ಉಡುಪಿ ಜಿಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿ
ಪೂರ್ವಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಡಾ.
ದಯಾನಂದ ಪೈ ಅವರು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ
ಸಂಸ್ಥೆಯು ನೀಡಿದ ಸಹಾಯದ ಬಗ್ಗೆ ಸ್ಮರಿಸಿದರು ಮತ್ತು
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಮಾತನಾಡಿ ಸಂಸ್ಥೆಯ ಇತ್ತೀಚಿನ ಸಾಧನೆಗಳು ಮತ್ತು
ಶೈಕ್ಷಣಿಕ ಪರಿವರ್ತನೆಗಳ ಬಗ್ಗೆ ತಿಳಿಸಿದರು ಮತ್ತು ವಿದ್ಯಾರ್ಥಿಕೇಂದ್ರಿತ ನಾವೀನ್ಯತೆಯನ್ನು ಸಾಧಿಸುವಲ್ಲಿ ಇಂತಹ ಕಾರ್ಯಾಗಾರದ ಮಹತ್ವದ ಬಗ್ಗೆ ತಿಳಿಸಿದರು.ಉಡುಪಿ ಜಿಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಗಳಾದ ದಿನೇಶ್ ಕೊಡವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಶೈಕ್ಷಣಿಕ ಡೀನ್ ಡಾ. ನಾಗರಾಜ್ ಭಟ್ ಅಥಿತಿಗಳನ್ನು
ಸ್ವಾಗತಿಸಿದರು ಮತ್ತು ಡೀನ್(ಆಂತರಿಕ ಗುಣಮಟ್ಟ) ಡಾ. ಸುದರ್ಶನ್ ರಾವ್ ಇವರು ಧನ್ಯವಾದ ಸಮರ್ಪಿಸಿದರು.

ಮಣಿಪಾಲ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ಇಂಜಿನಿಯರಿAಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ಕೆ ಹೊಳ್ಳ, ಸಂಸ್ಥೆಯ
ಪ್ರಾಧ್ಯಾಪಕರಾದ ಶ್ರೀಮತಿ ಲಹರಿ ವೈದ್ಯ ಮತ್ತು ಡಾ. ದೀಪಿಕಾ ಬಿ ವಿ,
ಅರುಣ್ ಉಪಧ್ಯಾಯ ಮತ್ತು ಡಾ. ಸುದರ್ಶನ್ ರಾವ್ ಈ
ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು.


















