ಮಂಗಳೂರು: ಮಂಗಳೂರು ನಗರದ ಉರ್ವದ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಚೀಫ್ ಮಿನಿಸ್ಟರ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್-2025 ಕ್ರೀಡಾಕೂಟವನ್ನು ಉದ್ಘಾಟಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಸ್ವಲ್ಪ ಹೊತ್ತು ಬ್ಯಾಡ್ಮಿಂಟನ್ ಆಡಿದರು.
ಅದಕ್ಕಿಂತ ಮೊದಲು ಸ್ಪರ್ಧಿಗಳ ಬ್ಯಾಡ್ಮಿಂಟನ್ ಆಟವನ್ನು ವೀಕ್ಷಿಸಿ ಸಂಭ್ರಮಿಸಿದರು. ಈ ವೇಳೆ ಸಿದ್ದರಾಮಯ್ಯನವರು ಕ್ರೀಡಾಳುಗಳಿಗೆ ಹಸ್ತಲಾಘವ ಮಾಡಿ ಶುಭ ಹಾರೈಸಿದರು.


















