Home » ಶ್ರೀ ಕೃಷ್ಣ ಮಠ: ವಿದ್ಯಾಸಿಂಹಾಚಾರ್ಯ ಅವರಿಗೆ ಶ್ರೀಪೂರ್ಣಪ್ರಜ್ಞ ಪ್ರಶಸ್ತಿ
ಶ್ರೀ ಕೃಷ್ಣ ಮಠ: ವಿದ್ಯಾಸಿಂಹಾಚಾರ್ಯ ಅವರಿಗೆ ಶ್ರೀಪೂರ್ಣಪ್ರಜ್ಞ ಪ್ರಶಸ್ತಿ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಿದ್ವಾಂಸರಾದ ಮಾಹುಲಿ ವಿದ್ಯಾಸಿಂಹಾಚಾರ್ಯ,ಮುಂಬೈ ಇವರನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು “ಶ್ರೀಪೂರ್ಣಪ್ರಜ್ಞ ಪ್ರಶಸ್ತಿ” ನೀಡಿ ಅನುಗ್ರಹಿಸಿದರು.
ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು,ಪ್ರಯಾಗದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.