ಉಡುಪಿ: ಸಾವಿತ್ರಿ ನಾಟ್ಯಶಾಲಾ ಉಡುಪಿ ತನ್ನ “ದಶ ಹರ್ಷೋತ್ಸವ” ದ ಅಂಗವಾಗಿ ರಾಜ್ಯಮಟ್ಟದ ಭರತನಾಟ್ಯ ಗುಂಪು ಸ್ಪರ್ಧೆ “ನೃತ್ಯ ವಲ್ಲರಿ” ಯನ್ನು ನವೆಂಬರ್ 16ರಂದು (ಭಾನುವಾರ) ಆಯೋಜಿಸಿದೆ.
ಈ ಸ್ಪರ್ಧೆ ಉಡುಪಿಯ ಯಕ್ಷಗಾನ ಕಲಾರಂಗ (IYC Auditorium)ದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಪ್ರಾರಂಭವಾಗಲಿದೆ.
ಸ್ಪರ್ಧೆಯಲ್ಲಿ 7ರಿಂದ 15 ಮಂದಿ ವಿದ್ಯಾರ್ಥಿಗಳನ್ನು ಒಳಗೊಂಡ ಗುಂಪುಗಳು ಭಾಗವಹಿಸಬಹುದಾಗಿದೆ. ವರ ರೂಪದಲ್ಲಿ ಗರಿಷ್ಠ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ವಿಜೇತ ತಂಡಗಳಿಗೆ ಪುರಸ್ಕಾರವಾಗಿ:
🥇 ಪ್ರಥಮ ಬಹುಮಾನ ₹15,000 + ಟ್ರೋಫಿ
🥈 ದ್ವಿತೀಯ ಬಹುಮಾನ ₹10,000 + ಟ್ರೋಫಿ
🥉 ತೃತೀಯ ಬಹುಮಾನ ₹5,000 + ಟ್ರೋಫಿ
ಹಾಗೂ ಪ್ರಥಮ ಸ್ಥಾನ ಪಡೆಯುವ ತಂಡದ ಶಿಕ್ಷಕ/ಗುರುವರ್ಯರಿಗೆ ವಿಶೇಷ ಸನ್ಮಾನ ಸಲ್ಲಿಸಲಾಗುವುದು.ಎಲ್ಲಾ ಸ್ಪರ್ಧಿಗಳಿಗೆ ಪಾಲ್ಗೊಳ್ಳುವ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಭಾಗವಹಿಸಲು ಆಸಕ್ತ ಗುಂಪುಗಳು ತಮ್ಮ ಹೆಸರುಗಳನ್ನು ಅಕ್ಟೋಬರ್ 30ರೊಳಗಾಗಿ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 8970691380




















