ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಮೂವ್ವರು ಹೆಂಡತಿಯರ ಗಂಡ!

ಕಲಬುರಗಿ: ಚಿಂಚೊಳ್ಳಿ ತಾಲೂಕಿನ ಮಿರಿಯಾಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಲು ಪರಸಿಯ ಪಾಲಿಶಿಂಗ್ ಮಾಲೀಕನೊಬ್ಬ ತನ್ನ ಪಾಲಿಸಿಂಗ್‌ಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಚಿಂಚೋಳಿ ಸಿಪಿಐ ಕಪಿಲದೇವ ತಿಳಿಸಿದ್ದಾರೆ.

ಮಿರಿಯಾಣ ಗ್ರಾಮದಲ್ಲಿರುವ ಕಲ್ಲು ಪರಸಿ ಪಾಲಿಶಿಂಗ್‌ದಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ತಂದೆ ತಾಯಿ ಜೊತೆ ಮಗಳಿದ್ದಳು. ಕಾಮುಕ ಮಾಲೀಕ ಸದ್ಧಾಂ ಅಬ್ದುಲ್ ಹಮೀದ್ ಅಲಿಯಾಸ್ ಇಮ್ರಾನ್ (33) ಎಂಬಾತ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದರಿಂದ 6 ತಿಂಗಳು ಗರ್ಭಿಣಿ ಆಗಿದ್ದಾಳೆ. ಕಳೆದ ಏಪ್ರೀಲ್ 20ರಂದು ಅತ್ಯಾಚಾರ ನಡೆಸಿದ್ದನು. ಆದರೆ ಮಿರಿಯಾಣ ಪೋಲಿಸ್ ಠಾಣೆ ಯಲ್ಲಿ ಅ.24ರಂದು ದಾಖಲಾಗಿದೆ.

ಮೂವರ ಜೊತೆ ಮದುವೆ:
ಮಾಲೀಕ ಸದ್ಧಾಂ ಅಬ್ದುಲ್ ಹಮೀದ್ ಮಿರಿಯಾಣ ಈತ ತನ್ನ ಪಾಲಿಸಿಂಗ್ ಮಶಿನ್‌ನಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಪುಸಲಾಯಿಸಿ ದೈಹಿಕ ಸಂಪರ್ಕವನ್ನು ಮಾಡುತ್ತಿದ್ದನು ಭೋವಿ, ಕಬ್ಬಲಿಗ ಮತ್ತು ಮುಸ್ಲಿಂ ಸಮುದಾಯದ ಮಹಿಳೆಯರ ಮೇಲೆ ಲೈಂಗಿಕವಾಗಿ ಬಳಸಿಕೊಂಡಿದ್ದರಿಂದ ಈತ ಮೂವರು ಮಹಿಳೆಯರನ್ನು ಮದುವೆ ಮಾಡಿಕೊಂಡಿದ್ದಾನೆ.

ತೆಲಂಗಾಣ ರಾಜ್ಯದ ತಾಂಡೂರಿನಲ್ಲಿ ಭೋವಿ ಮತ್ತು ಕಬ್ಬಲಿಗ ಮಹಿಳೆಯರಿಗೆ ಮನೆ ಮಾಡಿಟ್ಟಿದ್ದನು. ಮುಸ್ಲಿಂ ಸಮುದಾಯದ ಮಹಿಳೆಗೆ ಮಿರಿಯಾಣದಲ್ಲಿ ಮನೆ ಮಾಡಿದ್ದನು. ಆದರೆ ಕಾಮುಕ ತನ್ನ ಪಾಲಿಸಿಂಗ್ ಮಶಿನ್‌ನಲ್ಲಿ ಕಲ್ಲುಪರಸಿ ಕೆಲಸ ಮಾಡುವ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

ಆರೋಪಿಯ ಬಂಧನ:
15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಿರಿಯಾಣದಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಸಿಪಿಐ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ದ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.