ಮಂಗಳೂರು: ಸಿ.ಎ ಪೌಂಡೇಶನ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ ತ್ರಿಶಾ ಕ್ಲಾಸಸ್ ವತಿಯಿಂದ ಅಕ್ಟೋಬರ್ 31 ರಿಂದ 25 ದಿನಗಳ ಸಿ.ಎ ಫೌಂಡೇಶನ್ ರಿವಿಷನ್ ತರಗತಿಯನ್ನು ಆರಂಭಿಸಲಾಗುತ್ತಿದೆ.
ಅನುಭವಿ ಅಧ್ಯಾಪಕ ವೃಂದ ನಾಲ್ಕು ವಿಷಯಗಳ ಸಂಪೂರ್ಣ ಅಧ್ಯಯನ ಐಸಿಎಐ ಮಾದರಿಯ ಪೂರ್ವ ಸಿದ್ಧತಾ ಪರೀಕ್ಷೆ, ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು ಇವೆಲ್ಲವೂ ತರಗತಿಯ ವಿಶೇಷಣಗಳಾಗಿವೆ, ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನ ಎದುರಿಸಲು ಬೇಕಾದ ಆತ್ಮವಿಶ್ವಾಸ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ರಿವಿಶನ್ ತರಗತಿಗಳನ್ನ ಆಯೋಜಿಸಲಾಗಿದೆ. ಆಸಕ್ತರು ಮಂಗಳೂರಿನ ವಿದ್ಯಾರ್ಥಿ ಗ್ರಾಮದಲ್ಲಿನ ತ್ರಿಶಾ ಕಾಲೇಜಿಗೆ ಭೇಟಿ ನೀಡಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


















