ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಾಲೇಜಿನಲ್ಲಿ ದೀಪಾವಳಿ ಹಬ್ಬ ಆಚರಣೆ.

ಮೂಡ್ಲಕಟ್ಟೆ: ದೀಪಾವಳಿ ಸಂಭ್ರಮಾಚರಣೆ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಐ ಎಮ್ ಜೆ ಸಂಸ್ಥೆಯ ಅಕಾಡೆಮಿಕ್ ಡೀನ್ ಡಾ.ಎಸ್ ಎನ್ ಭಟ್, ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮಕೃಷ್ಣ ಹೆಗ್ಡೆ, ಉಪಪ್ರಾಂಶುಪಾಲರಾದ ಡಾ ಮೆಲ್ವಿನ್ ಡಿ ಸೋಜ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊಫೆಸರ್ ಅಕ್ಷತ ನಾಯಕ್, ವಿದ್ಯಾರ್ಥಿ ಮುಖಂಡ ಶ್ರೀಹರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರು ಉದ್ಘಾಟನಾ ಭಾಷಣದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. ತದನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಕುಣಿತ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗೂಡು ದೀಪ ತಯಾರಿಕೆ ಸ್ಪರ್ದೆ ಆಯೋಜಿಸಿದ್ದು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ವಿನ್ಯಾಸದ ಗೂಡುದೀಪ ತಯಾರಿಸಿ ದೀಪಾವಳಿ ಮೆರುಗನ್ನು ಹೆಚ್ಚಿಸಿದರು. ವಿದ್ಯಾರ್ಥಿನಿ ಸುಪ್ರೀತ ಎಚ್ ಕಾರ್ಯಕ್ರಮ ನಿರೂಪಿಸಿದರು. ಈ ಸಂಭ್ರಮಾಚರಣೆಯಲ್ಲಿ ಸಾಂಸ್ಕೃತಿಕ ಸಂಘದ ಸದಸ್ಯರು, ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಪಾಲ್ಗೊಂಡರು.