ಉಡುಪಿ: ಏಕದಂತ ಸೇವಾ ಸಮಿತಿ ಪಣಿಯಾಡಿ ಸಂಸ್ಥೆ ದಾನಿಗಳ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ತಲಾ 2000ರಂತೆ 27 ಕುಟುಂಬಕ್ಕೆ 54,000ರೂಪಾಯಿ ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸುವ ಪಂಚಮ ವರ್ಷದ ಕಾರ್ಯಕ್ರಮಕ್ಕೆ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ಅವರು ಪಣಿಯಾಡಿ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಾಲನೆ ನೀಡಿದರು.
ಸಮಿತಿಯ ಅಧ್ಯಕ್ಷ ನಾಗರಾಜ್ ಪಣಿಯಾಡಿ, ಗೌರವಾಧ್ಯಕ್ಷ ತಲ್ಲೂರು ಚಂದ್ರ ಶೇಖರ್ ಶೆಟ್ಟಿ, ಸಂಚಾಲಕ ಪಳ್ಳಿ ಲಕ್ಷ್ಮೀ ನಾರಾಯಣ ಹೆಗ್ಡೆ, ವಿಠ್ಠಲಮೂರ್ತಿ ಆಚಾರ್ಯ, ಸುಧಾಕರ್ ಪೂಜಾರಿ, ಪ್ರವೀಣ್ ಕುಂಜಿಬೆಟ್ಟು, ದಿವಾಕರ್ ಸಾಲಿಯಾನ್, ಕೆ. ನಾರಾಯಣ ಶೆಟ್ಟಿ, ರತ್ನಾಕರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.



















