ಹಿರಿಯಡಕ: ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ.) ಕೊಂಡಾಡಿ: ಅ.19 ರಂದು ದೀಪಾವಳಿ ಹಬ್ಬದ ಪ್ರಯುಕ್ತ ಗೂಡುದೀಪ ಸ್ಪರ್ಧೆ

ಹಿರಿಯಡಕ: ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರ ವತಿಯಿಂದ ಗೂಡುದೀಪ ಸ್ಪರ್ಧೆ ಅ.19 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಸ್ಪರ್ಧೆಯ ವಿಭಾಗಗಳು:

ಈ ಬಾರಿಯ ಗೂಡುದೀಪ ಸ್ಪರ್ಧೆಯನ್ನು ಎರಡು ಮುಖ್ಯ ವಿಭಾಗಗಳಲ್ಲಿ ಆಯೋಜಿಸಲಾಗಿದೆ:

  • ಸಾಂಪ್ರದಾಯಕ ವಿಭಾಗ
  • ಐಚ್ಚಿಕ ವಿಭಾಗ

ಬಹುಮಾನಗಳ ವಿವರ:

ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುತ್ತದೆ.

ಪ್ರಥಮ ಬಹುಮಾನ: ₹2000 ನಗದು ಮತ್ತು ಟ್ರೋಫಿ
ದ್ವಿತೀಯ ಬಹುಮಾನ: ₹1000 ನಗದು ಮತ್ತು ಟ್ರೋಫಿ
ಇದರ ಜೊತೆಗೆ, ಯಾವುದಾದರೂ ಒಂದು ಗೂಡುದೀಪಕ್ಕೆ ‘ಸಾರ್ವಜನಿಕರ ಆಯ್ಕೆ’ – ವಿಶೇಷ ಬಹುಮಾನವನ್ನೂ ನೀಡಲಾಗುವುದು.

ಸ್ಪರ್ಧಾ ನಿಯಮಗಳು:

  • ಕಡ್ಡಾಯವಾಗಿ ಸಂಘದ ಸದಸ್ಯರಿಗೆ ಮಾತ್ರ ಅವಕಾಶ.
  • ಸ್ಪರ್ಧಾಳುಗಳು ನಿಗದಿತ ದಿನಾ೦ಕದ೦ದು ಮಧ್ಯಾಹ್ನ ಗಂಟೆ 02:30 ಕ್ಕೆ ಹಾಜರಿರಬೇಕು.
  • ಒಂದು ತಂಡದಲ್ಲಿ ಗರಿಷ್ಠ 2 ಮಂದಿಗೆ ಅವಕಾಶ.
  • ಪುರುಷರರಿಗೆ “ಸಾಂಪ್ರದಾಯಕ ವಿಭಾಗ” ದಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶ.
  • 10ನೇ ತರಗತಿಯ ಕೆಳಗಿನ ಮಕ್ಕಳನ್ನು “ಮಕ್ಕಳ ವಿಭಾಗದಲ್ಲಿ ಪರಿಗಣಿಸಲಾಗುವುದು,
  • ಈ ವಿಭಾಗವು ‘ಕಸದಿಂದ ರಸ” ಎಂಬ ಕಲ್ಪನೆಯನ್ನು ಒಳಗೊಂಡಿರುತ್ತದೆ.
  • ಗೂಡುದೀಪ ತಯಾರಿಕೆಗೆ ಬೇಕಾಗುವ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಮತ್ತು ಸ್ಥಳದಲ್ಲೇ
    ತಯಾರಿಸಬೇಕು.
  • ಐಚ್ಚಿಕ ಗೂಡುದೀಪ ಸ್ಪರ್ಧೆಯಲ್ಲಿ ಕೃತಿಯ ಅಂದ ಹೆಚ್ಚಿಸಲು ಯಾವುದೇ ವಸ್ತುಗಳನ್ನು ಬಳಸಬಹುದು.
  • ತಯಾರಿಸಿ ತ೦ದ ಗೂಡುದೀಪಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
  • ಗೂಡುದೀಪ ತಯಾರಿಸಲು 3 ಗಂಟೆಗಳ ಕಾಲಾವಕಾಶ ನೀಡಲಾಗುವುದು ನೀಡಿದ ಸಮಯಾವಕಾಶದ
    ಒಳಗೆ ಕೃತಿಗಳನ್ನು ಪೂರ್ತಿಗೊಳಿಸಬೇಕು.
  • ಪ್ರತೀ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುವುದು.
  • ಯಾವುದಾದರೂ ಒ೦ದು ಗೂಡುದೀಪಕ್ಕೆ ‘ಸಾರ್ವಜನಿಕರ ಆಯ್ಕೆ’ – ವಿಶೇಷ ಬಹುಮಾನವನ್ನೂ ನೀಡಲಾಗುವುದು.
  • ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸುವಂತಿಲ್ಲ.
  • ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.

ಗೂಡುದೀಪ ಸ್ಪರ್ಧೆ ನೋಂದಣಿಗೆ ಕೊನೆಯ ದಿನಾಂಕ: 17.10.2025.

ಹೆಚ್ಚಿನ ಮಾಹಿತಿಗಾಗಿ 9845660232 ಮತ್ತು 8970724401 ಸಂಖ್ಯೆಗಳನ್ನು ಸಂಪರ್ಕಿಸಬಹುದು.