ಉಡುಪಿ:ದೇಸಿ ತಳಿಗಳ ಸಂರಕ್ಷಣೆ, ಉತ್ತೇಜನ ಕಾರ್ಯಕ್ರಮ

ಉಡುಪಿ: ಕೃಷಿ ಇಲಾಖೆ ವತಿಯಿಂದ ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಪ್ರೋತ್ಸಾಹ ನೀಡಲು ದೇಸಿ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ
ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭತ್ತ, ರಾಗಿ, ಜೋಳ, ದ್ವಿದಳ ಬೇಳೆಕಾಳು, ಸಿರಿ ಧಾನ್ಯ ಬೆಳೆಗಳ ದೇಸಿ
ತಳಿಗಳನ್ನು ಸಂರಕ್ಷಿಸುತ್ತಿರುವ ರೈತರಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ.

ಜಿಲ್ಲೆಯಿಂದ ಸ್ವಯಂಪ್ರೇರಿತವಾಗಿ 6 ಜನ ರೈತರು ಭಾಗವಹಿಸಬಹುದಾಗಿದ್ದು, ಮಲ್ಲಿಗೆ, ಮಸ್ಸೂರಿ, ಗುಲ್ವಾಡಿ ಸಣ್ಣ, ಗೌರಿ ಸೇರಿದಂತೆ 50 ವಿವಿಧ ದೇಸಿ ತಳಿಯ ಭತ್ತದ ಬೀಜಗಳನ್ನು ಈಗಾಗಲೇ ಸಂಗ್ರಹಿಸಿ ಬೀಜ ಬ್ಯಾಂಕ್ ನಲ್ಲಿ ಇರಿಸಲಾಗಿದೆ. ದೇಸಿತಳಿಗಳ ಸಂರಕ್ಷಣಾ ನಿರತ ರೈತರು ತಮ್ಮ ವಿವರಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.