ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 32 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ.

ವಿಟ್ಲ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಕಾರಣಕ್ಕೆ ವಾಹನ ಮಾಲಕನಿಗೆ ಬಂಟ್ವಾಳ ನ್ಯಾಯಾಲಯವು 32 ಸಾವಿರ ರೂ. ದಂಡ ವಿಧಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

ಕಳೆದ ಸೆಪ್ಟಂಬರ್ ನಲ್ಲಿ ಪುತ್ತೂರು ಕಡೆಯಿಂದ ವಿಟ್ಲದತ್ತ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ವಿಚಾರಣೆ ನಡೆಸಿ ಬಾಲಕ ಚಲಾಯಿಸಿದ ವಾಹನದ ಮಾಲಕ ಮುಹಮ್ಮದ್ ಅನೀಸ್ ಎಂಬವರಿಗೆ 32.000 ರೂ, ದಂಡ ವಿಧಿಸಿ ಆದೇಶಿಸಿದೆ.