ಮೂಡ್ಲಕಟ್ಟೆ ಕುಂದಾಪುರದ ಐಎಂಜೆ ಸಂಸ್ಥೆಯು 2025ರ ಅಕ್ಟೋಬರ್ 13 ರಂದು ಐಎಂಜೆ ಹೆಲ್ತ್ ಮತ್ತು ಸೈನ್ಸ್ ಬ್ಲಾಕ್ ಉದ್ಘಾಟನೆ ಹಾಗೂ ಪಠ್ಯಾರಂಭ ಸಮಾರಂಭವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಸಂಸ್ಥೆಯ ಪಯಣದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿ, ಬಿ.ಎಸ್.ಸಿ ನರ್ಸಿಂಗ್ 6ನೇ ಬ್ಯಾಚ್, ಅಲೈಡ್ ಹೆಲ್ತ್ ಸೈನ್ಸ್ 2ನೇ ಬ್ಯಾಚ್ ಮತ್ತು ಫಿಸಿಯೋಥೆರಪಿ 1ನೇ ಬ್ಯಾಚ್ಗಳ ಉದ್ಘಾಟನೆಯಿಂದ ಗುರುತಿಸಲ್ಪಟ್ಟಿತು.

ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಐಎಂಜೆ ಹೆಲ್ತ್ ಸೈನ್ಸ್ ಬ್ಲಾಕ್ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಗಿ, ನಂತರ ಪಠ್ಯಾರಂಭ ಕಾರ್ಯಕ್ರಮ ನಡೆಯಿತು.ಸಭೆಯನ್ನು ಮೂಡ್ಲಕಟ್ಟೆ ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲರು ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಿಸ್ ಅವರು ಆತ್ಮೀಯ ಸ್ವಾಗತ ಭಾಷಣದ ಮೂಲಕ ಆರಂಭಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಆಗಿ ಪ್ರೊ. ಡಾ. ಯು.ಟಿ. ಇಫ್ತಿಕಾರ್ ಫರೀದ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲೈಡ್ & ಹೆಲ್ತ್ ಕೇರ್ ಕೌನ್ಸಿಲ್ ಅವರು ಆಗಮಿಸಿದ್ದರು.ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಆರೋಗ್ಯ ವೃತ್ತಿಯಲ್ಲಿನ ವೃತ್ತಿಪರತೆ, ಮಾನವೀಯತೆ ಮತ್ತು ಬದ್ಧತೆಯ ಮಹತ್ವವನ್ನು ಒತ್ತಿ ಹೇಳಿದರು ಹಾಗೂ ಐಎಂಜೆ ಸಂಸ್ಥೆಗಳ ಶಿಕ್ಷಣದ ಗುಣಮಟ್ಟ ಹಾಗೂ ಆರೋಗ್ಯ ವೃತ್ತಿಪರರನ್ನು ರೂಪಿಸುವತ್ತ ಕೈಗೊಂಡ ಪ್ರಯತ್ನಗಳನ್ನು ಮೆಚ್ಚಿದರು.

ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ ಶ್ರೀ. ನಾಗರಾಜ್ ಶೆಟ್ಟಿ, ಪ್ರಾಂಶುಪಾಲರು, ಎಕ್ಸಲೆಂಟ್ ಪಿಯು ಕಾಲೇಜು, ಸುನ್ನಾರಿ, ಮತ್ತು
ಶ್ರೀ. ಗಣೇಶ್ ಶೆಟ್ಟಿ, ಪ್ರಾಂಶುಪಾಲರು, ಜ್ಞಾನಸುಧಾ ಪಿಯು ಕಾಲೇಜು, ಮಣಿಪಾ ಅವರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮೌಲ್ಯ, ಶಿಸ್ತಿನ ಅಗತ್ಯತೆ ಮತ್ತು ಸಮರ್ಪಣೆಯ ಮಹತ್ವದ ಕುರಿತು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಡಾ. ಎಸ್.ಎನ್ ಭಟ್, ನಿರ್ದೇಶಕರು(ಅಕಾಡೆಮಿಕ್ಸ್), ಐಎಂಜೆ ಸಂಸ್ಥೆಗಳು, ಡಾ. ರಾಮಕೃಷ್ಣ ಹೆಗ್ಡೆ, ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರು, ಐಎಂಜೆ ಸಂಸ್ಥೆಗಳು, ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಿಸ್, ಪ್ರಾಂಶುಪಾಲರು, ಮೂಡ್ಲಕಟ್ಟೆ ಕಾಲೇಜು ಆಫ್ ನರ್ಸಿಂಗ್ , ಮತ್ತು
ಡಾ. ಪದ್ಮಚರಣ ಸ್ವೇನ್, ಡೀನ್, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ವಿಭಾಗ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವು ರಾಷ್ಟ್ರಗೀತೆ ಯೊಂದಿಗೆ ಸಂಪನ್ನವಾಯಿತು.


















