ಉಡುಪಿ: ಸರಕಾರಿ ಆಸ್ಪತ್ರೆಯ ನಿವೇಶನದಲ್ಲಿ ರಾಶಿ ರಾಶಿ ತ್ಯಾಜ್ಯ; ಸೂಕ್ತ ಕ್ರಮಕ್ಕೆ ಆಗ್ರಹ

ಉಡುಪಿ: ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಂಭಾಗದ ಹಾಜೀ ಅಬ್ದುಲ್ಲಾ ತಾಯಿ‌ ಮತ್ತು‌‌ ಮಕ್ಕಳ ಆಸ್ಪತ್ರೆಯ ನಿವೇಶನದಲ್ಲಿ ಕಸ ತ್ಯಾಜ್ಯಗಳ ರಾಶಿ ಹಾಕಲಾಗಿದ್ದು, ಪರಿಣಾಮ ಪರಿಸರದಲ್ಲಿ ಗಬ್ಬು ವಾಸನೆ ಹೊಡೆಯುತ್ತಿದೆ.ಇದರಿಂದ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಸ್ಥಳದಲ್ಲಿ ಹಸಿ ತ್ಯಾಜ್ಯ, ಕಟ್ಟಡ ನಿರ್ಮಾಣದ ತ್ಯಾಜ್ಯಗಳು, ತುಂಬಿಕೊಂಡಿವೆ. ತ್ಯಾಜ್ಯ ಎಸೆಯಲು ಸರಕಾರಿ ಸ್ಥಳವನ್ನು ಬಳಸಿಕೊಂಡಿದ್ದು, ನಿವೇಶನದ ತಡೆಬೇಲಿಯನ್ನು ತೆರವುಗೊಳಿಸಲಾಗಿದೆ. ತಕ್ಷಣ ನಗರಸಭೆ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.