ಉಡುಪಿ: ಅ.17ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ: ಅ.17ರಂದು ಬೆಳಿಗ್ಗೆ 09:30ರಿಂದ ಸಂಜೆ 05:30 ಗಂಟೆಯವರೆಗೆ ಕುಂದಾಪುರ/ಹಾಲಾಡಿ/ಬೆಳ್ವೆ/ಹೈಕಾಡಿ/ಬಿದ್ಕಲ್‌ಕಟ್ಟೆ/ಆವರ್ಸೆ ವ್ಯಾಪ್ತಿಯಲ್ಲಿ 110/11ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರ ದಿಂದ ಹೊರಡುವ 11 ಕೆ.ವಿ. ಬೆಳ್ವೆ, ಹೈಕಾಡಿ,ಬಿದ್ಕಲ್‌ಕಟ್ಟೆ ಮತ್ತು ಆವರ್ಸೆ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ರಟ್ಟಾಡಿ, ಮಾವಿನಕೊಡ್ಲು, ಹೆಮ್ಮಣ್ಣು, ಅಮಾಸೆಬೈಲು, ಜಡ್ಡಿನಗದ್ದೆ, ತೊಂಬಟ್ಟು, ಬಳ್ಮನೆ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ, ಹಾರ್ದಳ್ಳಿ- ಮಂಡಳ್ಳಿ, ಯಡಾಡಿ-ಮತ್ಯಾಡಿ ಮತ್ತು ಹಾಲಾಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅ.18ರಂದು ಬೆಳಿಗ್ಗೆ 10:00ರಿಂದ ಸಂಜೆ 05:00 ಗಂಟೆಯವರೆಗೆ ಉಡುಪಿ/ ಹಿರಿಯಡ್ಕ/ಬಜೆ/ಪೆರ್ಡೂರು ವ್ಯಾಪ್ತಿಯಲ್ಲಿ 110/33/11 ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಲ್ಲಿ 110/11ಕೆವಿ 10 ಎಂವಿಎ ಶಕ್ತಿ ಪರಿವರ್ತಕಕ್ಕೆ ಸಂಬಂಧಿಸಿದ 11ಕೆವಿ ಬ್ಯಾಂಕ್ ಸಿಟಿಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಸದರಿ ಉಪಕೇಂದ್ರದಿಂದ ಹೊರಡುವ 11ಕೆವಿ ಹಿರಿಯಡ್ಕ, ಬಜೆ, ಪೆರ್ಡೂರು, ಮಾಣೈ, ಹಿರೇಬೆಟ್ಟು ಫೀಡರ್ ಮಾರ್ಗದಲ್ಲಿ ಬಜೆ ವಾಟರ್ ಸಪ್ಲೈ, ಹಿರಿಯಡ್ಕ ಪೇಟೆ, ಪಾಪುಜೆ, ಬಜೆ, ಗುಡ್ಡೆಯಂಗಡಿ, ಕೊಂಡಾಡಿ, ಕೋಡಿಬೆಟ್ಟು, ಪೆಣರ್ಂಕಿಲ, ಕಣಂಜಾರು, ಕಾಜರಗುತ್ತು, ಹರಿಖಂಡಿಗೆ, ವಡ್ಜ, ಸಾಣೆಕಲ್ಲು, ಮಾಣೈ ನವಗ್ರಾಮ, ಪಂಚನಬೆಟ್ಟು, ಮೂಂಡುಜೆ, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅ.18ರಂದು ಬೆಳಿಗ್ಗೆ 09:00ರಿಂದ ಸಂಜೆ 05:00 ಗಂಟೆಯವರೆಗೆ ಮಣಿಪಾಲ/ಅನಂತನಗರ/ಇಂದ್ರಾಳಿ/ಪ್ರಗತಿನಗರ ವ್ಯಾಪ್ತಿಯಲ್ಲಿ 110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಅನಂತನಗರ, ಇಂದ್ರಾಳಿ, ಪ್ರಗತಿನಗರ ಮತ್ತು ಮೂಡುಬೆಳ್ಳೆ ಫೀಡರ್ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಹುಡ್ಕೋ, ಅನಂತನಗರ, ಕಲ್ಯಾಣನಗರ, ಸೋನಿಯಾ ಕ್ಲಿನಿಕ್, ಹಯಗ್ರೀವ ನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು, ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.