ಉಡುಪಿ:ಕೆನರಾ ಬ್ಯಾಂಕ್ ‘ಕೆನರಾ ರಿಟೈಲ್ ಮೇಳ’ ಸಮಾರೋಪ

ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಎಂಜಿಎಂ ಕಾಲೇಜು ಮೈದಾನದಲ್ಲಿ ಅ. 11, 12ರಂದು ಯಶಸ್ವಿಯಾಗಿ ನಡೆದ ‘ಕೆನರಾ ರಿಟೈಲ್ ಮೇಳ-2025’ದ ಸಮಾರೋಪ ಸಮಾರಂಭ ರವಿವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಎಚ್.ಕೆ. ಗಂಗಾಧರ್ ಮಾತನಾಡಿ, ಮೇಳದಲ್ಲಿ ವಿವಿಧ ಕಂಪೆನಿಗಳ ವಾಹನಗಳು, ಹೌಸಿಂಗ್ ಮತ್ತು ಸೋಲಾರ್ ಸಿಸ್ಟಮ್‌ಗಳಿಗೆ ಸಾಲ ಸೌಲಭ್ಯ ಒದಗಿಲಾಗಿದೆ. ಅಲ್ಲದೆ ಎರಡು ದಿನಗಳ ಕಾಲ ಜಿಲ್ಲೆಯ ವಿವಿಧ ಭಾಗಗಳ ಸಾಕಷ್ಟು ಗ್ರಾಹಕರು ಆಗಮಿಸಿ ವಾಹನಗಳ ವೈಶಿಷ್ಟ್ಯತೆ, ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗ್ರಾಾಹಕರಿಂದ ಇನ್ನಷ್ಟು ಸಾಲಕ್ಕೆ ಬೇಡಿಕೆಯೂ ಬರುತ್ತಿದೆ. ಗ್ರಾಾಹಕರೊಂದಿಗೆ ಬ್ಯಾಂಕ್ ಸದಾ ಸ್ಪಂದಿಸಲಿದೆ ಎಂದು ತಿಳಿಸಿದರು.

ಪ್ರಾದೇಶಿಕ ಕಚೇರಿ ಉಡುಪಿ-1ರ ಡಿಜಿಎಂ ಮಹಮಾಯ ಪ್ರಸಾದ್ ರಾಯ್, ರಿಟೈಲ್ ಅಸೆಟ್ ಹಬ್‌ನ ಡಿವಿಜನಲ್ ಮ್ಯಾಾನೇಜರ್ ಕೌಶಿಕ್ ರೆಡ್ಡಿ ಅವರು ಮೇಳದಲ್ಲಿ ಭಾಗವಹಿಸಿದ ಎಲ್ಲ ವಾಹನ ಕಂಪೆನಿಗಳ ಡೀಲರ್‌ಗಳು, ಬಿಲ್ಡರ್‌ಗಳನ್ನು ಗೌರವಿಸಿದರು.ಎಸ್‌ಐಬಿಎಂ ಬ್ರ್ಯಾಂಚ್‌ನ ಸೀನಿಯರ್ ಮ್ಯಾನೇಜರ್ ಸಾಯಿಪ್ರಿಯಾ ನಿರೂಪಿಸಿದರು. ಡಿವಿಜನಲ್ ಮ್ಯಾನೇಜರ್ ಅರ್ಚನಾ ವಂದಿಸಿದರು.