ಉಡುಪಿ:ಕೆನರಾ ರಿಟೇಲ್ ಎಕ್ಸ್‌ಪೋ 2025 ಉದ್ಘಾಟನಾ ಸಮಾರಂಭ

ಉಡುಪಿ:ಕೆನರಾ ರಿಟೇಲ್ ಎಕ್ಸ್‌ಪೋ 2025 ಉದ್ಘಾಟನಾ ಸಮಾರಂಭವು ಅ.11ರಂದು ಸಮಯ ಬೆಳಿಗ್ಗೆ 09.30 ಕ್ಕೆ ಎಂಜಿಎಂ ಕಾಲೇಜು ಮೈದಾನ, ಉಡುಪಿ ಇಲ್ಲಿ ನಡೆಯಿತು.

ಕೆನರಾ ರಿಟೇಲ್ ಎಕ್ಸ್‌ಪೋ 2025 ಅ.11 ಮತ್ತು 12 ರಂದು ಬೆಳಿಗ್ಗೆ 09.30 ರಿಂದ ಸಂಜೆ 6.30 ರವರೆಗೆ ಇರಲಿದೆ.

ಉದ್ಘಾಟನಾ ಸಮಾರಂಭವನ್ನು ಉಡುಪಿಯ ಶಾಸಕರಾದ ಯಶ್ಪಾಲ್ ಸುವರ್ಣ ಇವರು ನೆರವೇರಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಆರ್ಥಿಕವಾಗಿ 11 ನೇ ಸ್ಥಾನದಲ್ಲಿದ್ದ ಭಾರತ ಇವತ್ತು 4ನೇ ಸ್ಥಾನಕ್ಕೆ ಬಂದಿದೆ. ಭಾರತದ ಆರ್ಥಿಕತೆ ಬಹಳಷ್ಟು ವೇಗವಾಗಿ ಬೆಳೆವಣಿಗೆ ಕಾಣುತ್ತಾ ಇದೆ. ಇನ್ನೊಂದು 5-6 ವರ್ಷದಲ್ಲಿ ವಿಶ್ವಕ್ಕೆ ಮಾದರಿಯಾಗುವಂತೆ ಬೆಳೆಯುತ್ತದೆ. ಕೆನರಾ ಬ್ಯಾಂಕ್ ದೇಶದ ಆರ್ಥಿಕತೆಗೆ ಬಹಳಷ್ಟು ಉತ್ತಮ ಕೊಡುಗೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಧಾಕರ ನಾಯಕ್ ಎಎಸ್ಪಿ ಉಡುಪಿ, ಪ್ರಸಾದ್ ರಾಜ್ ಕಾಂಚನ್ ಎಂಡಿ, ಕಾಂಚನ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಯು.ಡಿ. ಆಚಾರ್ಯ ಸಿಇಒ, ಆಡ್ ಸಿಂಡಿಕೇಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಇವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಕೆ. ಗಂಗಾಧರ್ ಜನರಲ್ ಮ್ಯಾನೇಜರ್, ಸಿಒ, ಮಣಿಪಾಲ ಇವರು ವಹಿಸಿದ್ದರು.ಕಾರ್ಯಕ್ರಮವನ್ನು ಅರ್ಚನ ನುಲ್ಲಿಪಾಡಿ ಹಾಗೂ ಮೇಘಾ ಶೆಟ್ಟಿ ನಿರೂಪಿಸಿದರು.ಕೌಶಿಕ್ ರೆಡ್ಡಿಯವರು ಧನ್ಯವಾದ ಸಮರ್ಪಿಸಿದರು.