ಶಿರ್ವ: ಗಾಂಜಾ ಮಾರಾಟಕ್ಕೆ ಯತ್ನ; ಇಬ್ಬರ ಬಂಧನ

ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೊಡವೂರು ಲಕ್ಷ್ಮೀನಗರ ನಿವಾಸಿ ಅಭಿಷೇಕ್ ಪಾಲನ್ (30) ಮತ್ತು ಕೊಳಲಗಿರಿಯ ಆರ್. ಶಾಶ್ವತ್(24) ಬಂಧಿತ ಆರೋಪಿಗಳು.

ಬೆಳಪು ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ರಸ್ತೆ ಬಳಿ ಗಾಂಜಾ ಮಾರಾಟ ಮಾಡುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರ್ವ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮಂಜುನಾಥ ಮರಬದ ನೇತೃತ್ವದ ತಂಡವು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ 5 ಸಾವಿರ ರೂ. ಮೌಲ್ಯದ 115.44 ಗ್ರಾಂ ಗಾಂಜಾ, ತೂಕದ ಡಿಜಿಟಲ್‌ ಯಂತ್ರ, ಮೋಟಾರ್‌ ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ‌. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.