ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ 23 ಜನರಿಗೆ ಇದೀಗ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ಈ ಪ್ರಕರಣವು 20 ಬಿಘಾ (12 ಎಕರೆ) ಜಮೀನಿಗೆ ಸಂಬಂಧಿಸಿದಂತೆ 20 ವರ್ಷಗಳಷ್ಟು ಹಳೆಯದಾದ ವಿವಾದವನ್ನು ಒಳಗೊಂಡಿತ್ತು. ಬಲವಾದ ವಿಚಾರಣೆ ಮತ್ತು 20 ಸಾಕ್ಷಿಗಳ ಸಾಕ್ಷ್ಯದ ಆಧಾರದ ಮೇಲೆ 23 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಯಿತು. ಅಲ್ಲದೆ, ಎಲ್ಲಾ ಆರೋಪಿಗಳಿಗೆ 85,000 ದಂಡವನ್ನು ಕೋರ್ಟ್ ವಿಧಿಸಿದೆ.
ಪ್ರಕರಣವೇನು?
2017ರ ಜುಲೈ 22ರಂದು 20 ಬಿಘಾ ಗ್ರಾಮದ ಜಮೀನಿಗಾಗಿ 20 ವರ್ಷಗಳ ಹಿಂದಿನ ದ್ವೇಷದ ಪರಿಣಾಮ ಈ ಕೊಲೆ ನಡೆದಿದೆ. ಎಲ್ಲಾ ಆರೋಪಿಗಳು ಒಟ್ಟಿಗೆ ಸೇರಿ ಸಂಜೀವ್ ಪಾಂಡೆಯ(ಕೊಲೆಯಾದ ವ್ಯಕ್ತಿ) ಎಂಬುವವರ ಮೇಲೆ ಬಂದೂಕುಗಳು ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದರು. ಚಿಕಿತ್ಸೆಯ ಸಮಯದಲ್ಲಿ ಸಂಜೀವ್ ಪಾಂಡೆ ಮೃತಪಟ್ಟಿದ್ದಾರೆ. ಇನ್ನು ಈ ವೇಳೆ ಇತರ ಮೂವರು ಗಂಭೀರ ಗಾಯಗೊಂಡಿದ್ದರು. ರಾಂಪುರದ ಮಿಲಕ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಪ್ರಾಸಿಕ್ಯೂಷನ್‌ನ ವಕಾಲತ್ತು ಮತ್ತು ಸಾಕ್ಷಿಗಳ ಅಚಲ ಸಾಕ್ಷ್ಯವು ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಲು ಕಾರಣವಾಗಿದೆ. ನ್ಯಾಯಾಂಗ ದೃಷ್ಟಿಕೋನದಿಂದ 23 ವ್ಯಕ್ತಿಗಳಿಗೆ ಏಕಕಾಲದಲ್ಲಿ ಜೀವಾವಧಿ ಶಿಕ್ಷೆಯನ್ನು ಅಪರೂಪದ ಮತ್ತು ಮಹತ್ವದ ಪ್ರಕರಣವೆಂದು ಪರಿಗಣಿಸಲಾಗಿದೆ.


















