ಉಡುಪಿ: ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ಮೂಲದ ಡಾ.ರಾಮದಾಸ ಪ್ರಭು ಅವರು ಗ್ರಾಮೀಣ ಭಾಗದ ಪಟ್ಲ ಶಾಲೆಯಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಪೂರೈಸಿ, ಉನ್ನತ ಶಿಕ್ಷಣ ಪಡೆದು ಆತಿಥ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ವ್ಯಕ್ತಿ. ಒಂದು ಸಣ್ಣ ಹಳ್ಳಿಯಿಂದ ಹೊರಟ ಅವರು ಪರಿಶ್ರಮದ ಮೂಲಕ ಆತಿಥ್ಯ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಹೆಸರು ಗಳಿಸಿದ್ದಾರೆ.
25 ವರ್ಷಗಳ ಶ್ರೇಷ್ಠ ಸೇವೆ:
ಕಳೆದ 25 ವರ್ಷಗಳಿಂದ ಮುಂಬೈ, ಪುಣೆ, ಲೋನಾವಲಾ, ಬರೋಡಾ, ಅಹಮದಾಬಾದ್, ಲಕ್ನೋ, ಕಾನ್ಪುರ್, ಇಂದೋರ್, ಗೋವಾ, ಬಂಡಿಪುರ ಮುಂತಾದ ಅನೇಕ ನಗರಗಳ ಹೋಟೆಲ್ ಹಾಗೂ ರೆಸಾರ್ಟ್ ಗಳಲ್ಲಿ ತಮ್ಮ ಸೇವೆ ಸಲ್ಲಿಸಿ ವಿಶಿಷ್ಟ ಅನುಭವವನ್ನು ಸಂಪಾದಿಸಿದ್ದಾರೆ. ಈ ಅವಧಿಯಲ್ಲಿ ಅನೇಕ ಹೋಟೆಲ್ಗಳನ್ನು ಲಾಭದಾಯಕ ಮತ್ತು ಅತಿಥಿ-ಕೇಂದ್ರಿತ ಸಂಸ್ಥೆಗಳಾಗಿ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ಪ್ರಸ್ತುತ ಹುದ್ದೆ:
ಪ್ರಸ್ತುತ ಉಡುಪಿ ಜಿಲ್ಲೆಯ ಆತ್ರಾಡಿಯ ಶಾಂಭವಿ ಹೋಟೆಲ್ ಮತ್ತು ಸಮಾವೇಶ ಕೇಂದ್ರದಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಭು ಅವರು ಅನೇಕ ಪೂರ್ವ-ಆರಂಭಿಕ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಅನುಭವ ಮತ್ತು ಸಾಧನೆ:
ಅವರ ವೃತ್ತಿಜೀವನವು ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ & ಹಾಲಿಡೇಸ್ ಲಿಮಿಟೆಡ್, ಎ ಜೆ ಗ್ರಾಂಡ್, ಮಣಿಪಾಲ್ ಇನ್, ಗೋವಾದ ಅಲ್ಕಾನ್ ಗ್ರೂಪ್ ಆಫ್ ಹೋಟೆಲ್ಸ್, ಫರಿಯಾಸ್ ಗ್ರೂಪ್ ಆಫ್ ಹೋಟೆಲ್ಸ್, ನ್ಯಾತಿ ಗ್ರೂಪ್ ಆಫ್ ಹೋಟೆಲ್ಸ್ ಪುಣೆ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಜೀವನದ ಅನುಭವ ಪಡೆದಿದ್ದಾರೆ.
ಅವರ ಸಾಧನೆಗಳನ್ನು ಪರಿಗಣಿಸಿ ಹಲವು ಪ್ರಶಸ್ತಿ ಮತ್ತು ಗೌರವಗಳು ದೊರೆತಿದ್ದು, ವಿಶೇಷವಾಗಿ ಅತ್ಯುತ್ತಮ ಜನರಲ್ ಮ್ಯಾನೇಜರ್ ಹಾಗೂ ಬ್ರಾಂಡ್ ನಾಯಕತ್ವಕ್ಕಾಗಿ ನೀಡಲಾದ ಅವರಿಗೆ ಪ್ರಶಸ್ತಿಗಳು ದೊರೆತುವೆ.
ಡಾ. ಪ್ರಭು ಅವರ ಕಾರ್ಯವೈಖರಿ ಕೇವಲ ಲಾಭ-ನಷ್ಟ ನಿರ್ವಹಣೆಯಲ್ಲ, ಆದಾಯ ಆಪ್ಟಿಮೈಸೇಶನ್, ಮಾನವಶಕ್ತಿ ಯೋಜನೆ, ವೆಚ್ಚ ನಿಯಂತ್ರಣ, ಸಾವಯವ ತೋಟಗಳ ನಿರ್ಮಾಣ, ಈವೆಂಟ್ ಕ್ಯಾಲೆಂಡರ್ ಹಾಗೂ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಗಳಂತಹ ನವೀನ ಯೋಜನೆಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅತಿಥಿ ತೃಪ್ತಿ ಹಾಗೂ ಉದ್ಯೋಗಿಗಳ ನಿಷ್ಠೆಯನ್ನು ಹೆಚ್ಚಿಸುವಲ್ಲಿ ಅವರ ನಾಯಕತ್ವ ವಿಶಿಷ್ಟವಾಗಿದೆ.
ರುಚಿಕರ ಅಡುಗೆಗಳ ಮೂಲಕ ಸಂಬಂಧ ಬೆಸೆದರು:
ಹೋಟೆಲ್ ಉದ್ಯಮದಲ್ಲಿ ಇವರು ಗ್ರಾಹಕರಿಗೆ ಹೊಸದಾದ, ರುಚಿಕರವಾದ ಆಹಾರ ಪದಾರ್ಥಗಳನ್ನು ಪರಿಚಯಸಿದ್ದಾರೆ. ಹೋಟೆಲ್ ಉದ್ಯಮಗಳನ್ನು ಬೆಳೆಸುವಲ್ಲಿ ಹಾಗೂ ಗ್ರಾಹಕರಿಗೆ ಬೇಕಾಗುವ ಸೇವೆಗಳು, ರುಚಿಕರ ಅಡುಗೆಗಳು, ಗ್ರಾಹಕರಿಗೆ ಹಾಗೂ ಹೋಟೆಲ್ ಗೆ ಇವರು ಒಂದೊಳ್ಳೆ ಸಂಬಂಧ ಬೆಳೆಸುವಲ್ಲಿ, ಗ್ರಾಹಕರು ಅನುಭವಿಸುವ, ತೃಪ್ತಿಪಡಿಸುವಲ್ಲಿ ಇವರ ಪಾತ್ರ ಮಹತ್ವವಾಗಿದೆ.
2025 ರ ಮ್ಯಾನೇಜರ್ ಪವರ್ ಲಿಸ್ಟ್ ನಲ್ಲಿ:
ಅವರ ಸಾಧನೆ ಮತ್ತು ಪರಿಶ್ರಮಕ್ಕೆ ಸಂದ ಗೌರವವೆಂದರೆ ಅದು 2025ರ ಜನರಲ್ ಮ್ಯಾನೇಜರ್ಗಳ ಪವರ್ ಲಿಸ್ಟ್ನಲ್ಲಿ ಅವರಿಗೆ ಸಿಕ್ಕಿರುವ ಮನ್ನಣೆ ಮತ್ತು ಗೌರವ. ಇದರಿಂದ ಈ ಕ್ಷೇತ್ರದಲ್ಲಿ ಅವರು ಇನ್ನಷ್ಟು ಸಾಧನೆ ಮಾಡಿದಂತಾಗಿದೆ.


















