ಮಂಗಳೂರು: ಶಾರ್ದೂಲವನ್ನು ಬೆನ್ನಟ್ಟಿದ ‘ಗ್ರಾಮ ಸಿಂಹ’

ಮಂಗಳೂರು: ದಸರಾ ಸಂದರ್ಭ ಕರಾವಳಿಯಲ್ಲಿ ಹುಲಿ, ಕರಡಿ, ಶಾರ್ದೂಲ ವೇಷಗಳು ಸರ್ವೇ ಸಾಮಾನ್ಯ. ಇಂತಹ ಶಾರ್ದೂಲ ವೇಷಧಾರಿಗಳ ತಂಡವೊಂದು ಮನೆಯೊಂದರ ಶ್ವಾನದ ಬೊಗಳುವಿಕೆಗೆ ದಿಕ್ಕಾಪಾಲಾಗಿ ಓಡಿದ ವೀಡಿಯೋವೊಂದು ವೈರಲ್ ಸಖತ್ ಆಗಿದೆ.

ಬ್ಯಾಂಡ್ ಬಡಿಯುತ್ತಾ ಬಂದ ಶಾರ್ದೂಲ ವೇಷಧಾರಿಗಳ ತಂಡ ಮನೆಯೊಂದರ ಗೇಟ್ ಹೊಕ್ಕು ಇನ್ನೇನು ಅಂಗಳಕ್ಕೆ ಕಾಲಿಡಬೇಕು. ಅಷ್ಟರಲ್ಲಿ ಮನೆಯ ಶ್ವಾನ ಜೋರಾಗಿ ಬೊಗಳಲಾರಂಭಿಸಿದೆ. ನಾಯಿಯ ಬೊಬ್ಬೆಗೆ ಬೆದರಿದ ವೇಷ ಹಾಕಿದವರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ. ವೇಷಧಾರಿಗಳು ಓಟಕ್ಕಿತ್ತ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ಕಂಡು ಮನೆಯ ಮಹಿಳೆ ನಗುವ ಧ್ವನಿಯೂ ವೀಡಿಯೋದಲ್ಲಿ ಕೇಳಿ ಬಂದಿದೆ.