ಆಗಾಗ ಒಂದಷ್ಟು ಕ್ಷಣ ನಗೋಣ ಪ್ಲೀಸ್ : ಇಂದು ವಿಶ್ವ ನಗು ದಿನ, ನಗೋದು ಆರೋಗ್ಯಕ್ಕೆ ಒಳ್ಳೇದು

ವಿಶ್ವ ನಗು ದಿನ ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಸರಳವಾದರೂ ಬಹು ಮುಖ್ಯವಾದದ್ದು – ಜನರ ಮುಖದಲ್ಲಿ ನಗುವನ್ನು ತರಲು ಮತ್ತು ನಗುವಿನ ಮೂಲಕ ಅರು ಆರೋಗ್ಯದಿಂದಿರಿಸಲು ಈ ದಿನವನ್ನು ಆಚರಿಸಲಾಗುತ್ತೆ. ಸ್ಮೈಲಿ ಮುಖದ ಚಿಹ್ನೆಯನ್ನು ರಚಿಸಿದ ಹಾರ್ವೆ ಬಾಲ್ ಅವರು 1999ರಲ್ಲಿ ವಿಶ್ವ ನಗು ದಿನವನ್ನು ಆರಂಭಿಸಿದರು. ನಗುವು ಮಾನವ ಹೃದಯಗಳನ್ನು ಒಂದಾಗಿಸುವ ಶಕ್ತಿ ಹೊಂದಿದೆ ಎನ್ನು ನಂಬಿಕೆ ಅವರದ್ದಾದ್ದರಿಂದ ಈ ದಿನದ ಆಚರಣೆ ಹುಟ್ಟಿಕೊಂಡಿತು.

ಏಕೆ ಈ ಆಚರಣೆ?

ಅಂದ ಹಾಗೆ ಅಕ್ಟೋಬರ್ 5ರಂದು ವಿಶ್ವ ನಗು ದಿನವನ್ನು ಆಚರಿಸುವುದು ನಗುವಿನ ಮಹತ್ವವನ್ನು ನೆನಪಿಸಿಕೊಳ್ಳಲು. ನಗುವು ಭಾಷೆಯ, ಧರ್ಮದ ಅಥವಾ ಸಂಸ್ಕೃತಿಯ ಅಡೆತಡೆಗಳನ್ನು ಮೀರಿ ಸಂತೋಷವನ್ನು ತೋರಿಸುವ ಸಂಕೇತವಾಗಿದೆ.

ನಗುವಿನಿಂದ ಎಷ್ಟೊಂದೆಲ್ಲಾ ಲಾಭಗಳು

ನಗು ಒತ್ತಡ ಕಡಿಮೆ ಮಾಡುತ್ತದೆ – ನಗು ನಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ.

ನಗು ರಕ್ತದೊತ್ತಡ ಇಳಿಸುತ್ತದೆ – ನಿಯಮಿತ ನಗುವು ಹೃದಯದ ಆರೋಗ್ಯಕ್ಕೆ ಸಹಾಯಕ.

ನಗು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ – ನಗುವಿನ ಮೂಲಕ ದೇಹ ಹೆಚ್ಚು ಬಲವಾಗುತ್ತದೆ.

ನಗು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ – ಇದು “ಸಂತೋಷದ ಹಾರ್ಮೋನು”ಗಳನ್ನು ಹೆಚ್ಚಿಸಿ ಮನಸ್ಸಿಗೆ ಹರ್ಷ ನೀಡುತ್ತದೆ.

ಹೀಗೆ ಆಚರಿಸಿ:

ಇತರರನ್ನು ಆಗಾಗ ನಗಿಸಲು ಪ್ರಯತ್ನಿಸಿ, ಕುಟುಂಬದವರೊಂದಿಗೆ ಖುಷಿಯ ನಗುವಿನ ಕ್ಷಣಗಳನ್ನು ಹಂಚಿಕೊಂಡು ನಕ್ಕುಬಿಡಿ. ಸ್ನೇಹಿತರೊಂದಿಗೂ ಕಾಮಿಡಿ ಮಾಡುತ್ತ ಅರನ್ನೂ ನಗಿಸಿ ನೀವೂ ನಕ್ಕುಬಿಡಿ.ಒಂದು ನಗು ಅನೇಕ ಹೃದಯಗಳನ್ನು ಗೆಲ್ಲಬಹುದು. ಆದ್ದರಿಂದ ವಿಶ್ವ ನಗು ದಿನದಂದು ಮಾತ್ರವಲ್ಲ, ಪ್ರತಿದಿನ ನಗುನಗುತ್ತ ಬದುಕೋಣ.