ಉಡುಪಿ: ಮಲ್ಪೆ ಕೊಡವೂರಿನ ಸಾಲ್ಮರದಲ್ಲಿರುವ ತನ್ನದೇ ಮನೆಯಲ್ಲಿ ಕೊಲೆಯಾದ ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ನ ಪೋಸ್ಟ್ಮಾರ್ಟಂ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಸೈಫ್ ಅವರ ದೇಹವನ್ನು ವಿಶೇಷವಾಗಿ ಸಜ್ಜುಗೊಳಿಸಿದ ಟೆಂಪೋದಲ್ಲಿ ಆತ್ರಾಡಿ ಮಸೀದಿಗೆ ಕರೆತರಲಾಯಿತು.
ಅವರೇ ಮಾಲೀಕರಾಗಿದ್ದ ಬಸ್ಸುಗಳು ಸಹ ಮೆರವಣಿಗೆಯುದ್ದಕ್ಕೂ ಸಾಗಿಬಂದವು. ಸಾವಿರಾರು ಮಂದಿ ಜನರ ಸಾಗರದ ನಡುವೆ ಅಂತಿಮ ಗೌರವ ಸಲ್ಲಿಸಿದರು.
ಅತ್ರಾಡಿ ಮಸೀದಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ.


















