ಡಿಜಿಟೆಲ್ ಪಾವತಿಗೆ RBI ನಿಂದ ಬಂತು ಹೊಸ ರೂಲ್ಸ್!

ಡಿಜಿಟಲ್​ ಪಾವತಿ ವ್ಯವಸ್ಥೆಯಲ್ಲಿ ಒಟಿಪಿಯಲ್ಲದೇ ಎರಡು ಹಂತದ ದೃಢೀಕರಣದ ಮಾನದಂಡವನ್ನು ಅನುಸರಿಸುವಂತೆ 2026ರ ಏಪ್ರಿಲ್​ 1ರಂದು ಜಾರಿಗೊಳಿಸುವುದಾಗಿ ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ(ಆರ್​ಬಿಐ) ಗುರುವಾರ(ಸೆ.24) ಘೋಷಿಸಿದೆ.

ಇದೀಗ ಪ್ರಸ್ತುತ, ಸದ್ಯದ ಎಲ್ಲಾ ಡಿಜಿಟಲ್ ಪಾವತಿಗಳು ಹೆಚ್ಚುವರಿ ಅಂಶವಾಗಿ SMS ಆಧಾರಿತ ಒಂದು-ಬಾರಿ ಪಾಸ್‌ವರ್ಡ್‌ಗಳನ್ನು (OTP ಗಳು) ಮಾತ್ರ ಅವಲಂಬಿಸಿವೆ. 2026ರ ಏಪ್ರಿಲ್​ 1ರಿಂದ ಒಟಿಪಿ ಜತೆ ಎರಡು ಹಂತದ ದೃಢೀಕರಣವನ್ನು ಕಡ್ಡಾಯಗೊಳಿಸಲಿದೆ.

ಆರ್‌ಬಿಐ ನಿರ್ದಿಷ್ಟ ವಿಧಾನಗಳನ್ನು ಕಡ್ಡಾಯಗೊಳಿಸದಿದ್ದರೂ, ಸಾಮಾನ್ಯವಾಗಿ ಬಳಕೆದಾರರಿಗೆ ತಿಳಿದಿರುವ ಪಾಸ್‌ವರ್ಡ್, ಪಿನ್‌, ಕಾರ್ಡ್, ಫಿಂಗರ್‌ಪ್ರಿಂಟ್ ಅಥವಾ ಆಧಾರ್ ಆಧಾರಿತ ಪರಿಶೀಲನೆಯಂತಹ ಬಯೋಮೆಟ್ರಿಕ್ ಗುರುತಿಸುವಿಕೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಆರ್​ಬಿಐ ಹೇಳಿದೆ.(ಇದರಲ್ಲಿ ಯಾವುದಾದರೂ ಎರಡು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ).

“ವಹಿವಾಟಿಗೆ ಸಂಬಂಧಿಸಿದಂತೆ ಅಪಾಯದ(ಭದ್ರತೆ) ಆಧಾರದ ಮೇಲೆ, ಕನಿಷ್ಠ ಎರಡು ಅಂಶಗಳ ದೃಢೀಕರಣವನ್ನು ಮೀರಿದ ಹೆಚ್ಚುವರಿ ಪರಿಶೀಲನೆಗಳನ್ನು ಆಶ್ರಯಿಸಬಹುದು” ಎಂದು ಆರ್‌ಬಿಐ ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.