ಮುಂಬೈ: ಮೋಟಾರ್‌ಬೈಕ್ ಪ್ರಿಯರಿಗೆ ಒಂದು ಗುಡ್ ನ್ಯೂಸ್. ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್, ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೂ ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ತಲುಪಿಸುವುದಾಗಿ ಘೋಷಿಸಿದೆ.
ರಾಯಲ್ ಎನ್‌ಫೀಲ್ಡ್ ತನ್ನ 350 ಸಿಸಿ ಶ್ರೇಣಿಯ ಬೈಕ್‌ಗಳು– ಬುಲೆಟ್ 350, ಕ್ಲಾಸಿಕ್ 350, ಹಂಟರ್ 350, ಗೋವಾನ್ ಕ್ಲಾಸಿಕ್ 350 ಮತ್ತು ಮೀಟಿಯರ್ 350–ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವಂತೆ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಕಂಪನಿ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 22ರಿಂದ ಬೆಂಗಳೂರು, ಗುರುಗ್ರಾಮ್, ಕೋಲ್ಕತ್ತಾ, ಲಖನೌ ಮತ್ತು ಮುಂಬೈ ನಗರಗಳ ಗ್ರಾಹಕರು ಈ ಸೇವೆಯನ್ನು ಸವಿಯಬಹುದು. ಈ ಮೂಲಕ ಗ್ರಾಹಕರು ಶೋರೂಮ್‌ಗೆ ಹೋಗದೆ ಆನ್‌ಲೈನ್‌ನಲ್ಲಿ ನೇರವಾಗಿ ತಮ್ಮ ಇಷ್ಟದ ಮಾದರಿಯ ರಾಯಲ್ ಎನ್‌ಫೀಲ್ಡ್ ಬೈಕ್ ಬುಕ್ ಮಾಡಬಹುದಾಗಿದೆ.
ಈ ಹೊಸ ಹೆಜ್ಜೆ ಭಾರತೀಯ ಇ–ಕಾಮರ್ಸ್ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ವಾಹನ ಮಾರಾಟವನ್ನೇ ಇಂಟರ್ನೆಟ್ ವೇದಿಕೆಗೆ ತಂದುಕೊಂಡುಬರುವ ಮೂಲಕ ಕಂಪನಿಗಳು ಗ್ರಾಹಕರಿಗೆ ಇನ್ನಷ್ಟು ಸುಲಭ ಹಾಗೂ ತ್ವರಿತ ಅನುಭವವನ್ನು ನೀಡಲು ಪ್ರಯತ್ನಿಸುತ್ತಿವೆ.ಗ್ರಾಹಕರಿಗೆ ಇದು ಸೌಲಭ್ಯ, ವಿಶ್ವಾಸ ಹಾಗೂ ಸಮಯ ಉಳಿತಾಯದ ಹೊಸ ಆಯ್ಕೆ ಆಗಿ ಪರಿಣಮಿಸುವ ನಿರೀಕ್ಷೆ ವ್ಯಕ್ತವಾಗಿದೆ.


















