ಉಡುಪಿ:ಶ್ರೀ ಗಣೇಶೋತ್ಸವ ಸಮಿತಿ, ಕೊಡವೂರು ಯುವಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ (ರಿ.) ಕೊಡವೂರು ಲಯನ್ಸ್ ಕ್ಲಬ್ ಪರ್ಕಳ ಇವರ ಆಶ್ರಯದಲ್ಲಿ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ, ಉಡುಪಿ ಪಶು ಚಿಕಿತ್ಸಾಲಯ, ಮಲ್ಪೆ ಇವರ ಜಂಟಿ ಆಶ್ರಯದಲ್ಲಿ 7ನೇ ಬಾರಿಗೆ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಬೀದಿನಾಯಿ, ಸಾಕುನಾಯಿ ಮತ್ತು ಬೆಕ್ಕುಗಳಿಗೆ ಹುಚ್ಚುರೋಗ ಬಾರದಂತೆ ತಡೆಗಟ್ಟಲು ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು
ದಿನಾಂಕ 28-05-2025ನೇ ಭಾನುವಾರ ಬೆಳಿಗ್ಗೆ 9 ರಿಂದ 11 ಗಂಟೆಯ ತನಕ ಕೊಡವೂರು ಶಾಲಾ ವಠಾರದಲ್ಲಿ ನಡೆಸಲಾಗುವುದು.
ಕಾರ್ಯಕ್ರಮದ ಸಂಯೋಜಕರಾಗಿ ಕೆ. ವಿಜಯ್ ಕೊಡವೂರು ನಗರಸಭಾ ಸದಸ್ಯರು,ಅಧ್ಯಕ್ಷರು ಸ್ಥಾಯಿ ಸಮಿತಿ ಪಟ್ಟಣ ಮತ್ತು ಪುರೋಭಿವೃದ್ಧಿ ಇವರು ಪಾಲ್ಗೊಳ್ಳಲಿದ್ದಾರೆ.


















