ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ: ವಾರ್ಷಿಕ ಸಭೆ : ಶೇ.13% ಡಿವಿಡೆಂಡ್ ಹಾಗೂ ವಿದ್ಯಾರ್ಥಿವೇತನ ವಿತರಣೆ

ಬ್ರಹ್ಮಾವರ : ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಬ್ರಹ್ಮಾವರ,ವಾರ್ಷಿಕ ಮಹಾಸಭೆಯು ರವಿವಾರ ಕೇಂದ್ರದ ಕಛೇರಿಯ ಹತ್ತಿರದ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರು ಶ್ರೀ ಶಂಕರ ಪೂಜಾರಿ ಕುಕ್ಕುಡೆ ಅಧ್ಯಕ್ಷತೆ
ವಹಿಸಿದ ಮಾತನಾಡಿ, ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಗ್ರಾಹಕರಿಗೆ ಹಾಗೂ ಸದಸ್ಯರಿಗೆ ಕ್ಷಿಪ್ರಗತಿಯಲ್ಲಿ ಸೇವೆ ಒದಗಿಸುತ್ತಾ ಪ್ರಗತಿಯ ಹಾದಿಯಲ್ಲಿ ಸಾಗಿ ಯಶಸ್ವಿಯಾಗಿ ಪೂರೈಸಿ ಸಂಘವು ಈಗಾಗಲೇ ಪ್ರಧಾನಕಛೇರಿ ಸ್ವಂತ ಕಟ್ಟಡ ಹೊಂದಿ, ಸಂಪೂರ್ಣ ಹವಾನಿಯಂತ್ರಿತ ಅಳವಡಿಸಿಕೊಳ್ಳಲಾಗಿದೆ.

2024-25ನೇ ಸಾಲಿನಲ್ಲಿ ಸಂಘವು 174 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು, ವರದಿ ವರ್ಷಾಂತ್ಯಕ್ಕೆ 1ಕೋಟಿ ರೂ.
ಪಾಲು ಬಂಡವಾಳ, 36ಕೋಟಿ ರೂ. ಹೊರಬಾಕಿ ಸಾಲ ಇರುತ್ತದೆ.ವರ್ಷಾಂತ್ಯೆಕ್ಕೆ 68.03 ಲಕ್ಷ ರೂ. ಲಾಭ ಹೊಂದಿದ್ದು, ಸದಸ್ಯರಿಗೆ ಶೇಕಡ 13 ಪಾಲು ಮುನಾಫೆ ನೀಡಲಾಗುವುದು ಎಂದರು. ಸುಮಾರು 250 “ಅ ತರಗತಿ” ಸದಸ್ಯರ ಮಕ್ಕಳಿಗೆ ರೂ.4.50 ಲಕ್ಷ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಹಾಗೆಯೇ ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ದೈನಿಕ ಠೇವಣಿಗಾರರನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸುರೇಶ್ ಎನ್.ಕರ್ಕೇರಾ ವಾರ್ಷಿಕ ವರದಿ ಮಂಡಿಸಿ, ಉಪಾಧ್ಯಕ್ಷರಾದ ವಿಠಲ ಪೂಜಾರಿ ಹೆರಂಜೆ, ನಿರ್ದೇಶಕರಾದ ಅಚ್ಚುತ ಕೋಟ್ಯಾನ್ ಹೇರೂರು, ಕೃಷ್ಣ ಪೂಜಾರಿ ಅಮ್ಮುಂಜೆ, ಉಮೇಶ್ ಪೂಜಾರಿ ಬೆಳ್ಮಾರು, ನಾರಾಯಣ ಪೂಜಾರಿ ಉಗ್ಗೆಲ್‌ಬೆಟ್ಟು, ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ವಿಠಲ ಪೂಜಾರಿ ಮಟಪಾಡಿ ಇವರು ಸ್ವಾಗತಿಸಿದರು, ನಿರ್ದೇಶಕರಾದ ಸತೀಶ್ ಪೂಜಾರಿ ಉಗ್ಗೆಲ್‌ಬೆಟ್ಟು ಇವರು ಧನ್ಯವಾದ ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.