ರಿಯಾಲಿಟಿ ಶೋನಲ್ಲಿ ನಟಿ ಸಂಯುಕ್ತಾ ಹೆಗಡೆಗೆ ಪ್ರಾಣಿಗಳ ಕಣ್ಣು ತಿನ್ನೋ ಟಾಸ್ಕ್‌.!

ಸಂಯುಕ್ತಾ ಹೆಗಡೆ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಈ ಮೊದಲು ಹಿಂದಿ ಯಾಲಿಟಿಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಅವರು ‘ಬಿಗ್ ಬಾಸ್​’ಗೆ ಬಂದಿದ್ದರು.

ಈಗ ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಪ್ರಸಾರ ಆಗುವ ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ನ ಎರಡನೇ ಸೀಸನ್​ನಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ.

ಇಲ್ಲಿ ‘ಐ ಬಕೆಟ್ ಚಾಲೆಂಜ್’ ನೀಡಲಾಗಿದೆ. ಅಂದರೆ, ಪ್ರಾಣಿ ಒಂದರ ಕಣ್ಣುಗಳನ್ನು ಇಡಲಾಗಿದೆ. ಅದನ್ನು ತಿನ್ನೋ ಚಾಲೆಂಜ್ ಇದು. ಕಣ್ಣುಗಳನ್ನು ತಿನ್ನಲು ಹೋಗಿ ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಇನ್ನು ಸಂಯುಕ್ತಾ ಕಣ್ಣುಗಳನ್ನು ತಿಂತಾರಾ ಇಲ್ವಾ ಅಂತ ನೋಡೋದಕ್ಕೆ ಶೋ ನೋಡಬೇಕಾಗಿದೆ.