ಕುಂದಾಪುರ: ಮೂಡ್ಲಕಟ್ಟೆ ಎಂಐಟಿಯ ರಿಸರ್ಚ್ ಸೆಲ್ ವತಿಯಿಂದ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಹಾಗೂ ಡೇಟಾ ಸೈನ್ಸ್ ಕುರಿತ ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನ ಎರಡು ದಿನಗಳ ಕಾಲ ನಡೆಯಿತು.
ಸಮ್ಮೇಳನವನ್ನು ಮಣಿಪಾಲ ಎಂಎಡಿಸಿ ಚೇಯರ್ಮೆನ್ ಡಾ. ಬ್ರಿಗೇಡಿಯರ್ ಸುರಜಿತ್ ಸಿಂಗ್ ಪಾಬ್ಲಾ ಉದ್ಘಾಟಿಸಿ ದರು. ದಿಕ್ಸೂಚಿ ಭಾಷಣ ಮಾಡಿದ ಅವರು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್(ಎಬಿಸಿ) ಮತ್ತು ಮಾನವ-ಕೇಂದ್ರಿತ ಎಐ ಕುರಿತು ಅತ್ಯುತ್ತಮ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ ಮಾತನಾಡಿ, ಎಐ ಅಂತಹ ತಂತ್ರಜ್ಞಾನಯನ್ನು ಧನಾತ್ಮಕವಾಗಿ ಬಳಸಿಕೊಂಡರೆ ಸಕಲ ಜೀವಿಗಳಿಗೆ ದಾರಿದೀಪವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಕಲಿತು, ಸದುಪಯೋಗ ಪಡೆದುಕೊಳ್ಳಬೇಕೇಂದು ತಿಳಿಸಿದರು.ಡಾ.ಚರನ್ಜಿತ್ ಕೌರ್ ಪಾಬ್ಲಾ ಶುಭಾಶಯ ಕೋರಿದರು. ಉಪಪ್ರಾಂಶು ಪಾಲ ಡಾ.ಮೆಲ್ವಿನ್ ಡಿಸೋಜ ಮಾತನಾಡಿ ದರು. ಐಎಂಜೆ ರಿಸರ್ಚ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಡಾ. ಸತ್ಯಜಿತ್, ವಿವಿಧ ಡೀನ್ಗಳು, ವಿಭಾಗ ಮುಖ್ಯಸ್ಥರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಹ್ವಾನಿತ ಪ್ರತಿನಿಧಿಗಳು, ಬೋಧಕ ವೃಂದ, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದು ಪ್ರತ್ಯಕ್ಷ ಹಾಗೂ ವರ್ಚುವಲ್ ಆಗಿ ತಮ್ಮ ಪ್ರಬಂಧ ಮಂಡಿಸಿದರು.
ಸಮ್ಮೇಳನ ಸಂಯೋಜಕ, ಸಂಶೋಧನಾ ವಿಭಾಗದ ಡೀನ್ ಡಾ.ಇಂದ್ರ ವಿಜಯ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಖಿತಾ ಸ್ವಾಗತಿಸಿದರು. ಪ್ರೊ.ಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಅನುಷಾ ವಂದಿಸಿದರು.


















