ಉಡುಪಿ: ಉಡುಪಿ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ:06-09-2025 ರಂದು ಸಂಘದ ಅಧ್ಯಕ್ಷರಾದ ಅರುಣ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಜರಗಿತು.
ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಹೆಗ್ಡೆ ಸಂಘದ
67 ನೇ ವರ್ಷದ ವಾರ್ಷಿಕ ವರದಿ, ವರದಿಗೆ ತಯಾರಿಸಿದ ಅನುಪಾಲನಾ ವರದಿ, ಆಯ-ವ್ಯಯ ಪಟ್ಟಿ ಹಾಗೂ 2025-26 ನೇ ಸಾಲಿನ ಯೋಜಿತ ಕಾರ್ಯಕ್ರಮಗಳನ್ನು ಮಂಡಿಸಿದರು. ಹಾಗೂ 2025-26 ನೇ ಸಾಲಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ನೇಮಕಾತಿ ಬಗ್ಗೆ ಮಹಾಸಭೆಯಲ್ಲಿ ಮಂಡನೆ ಮಾಡಿ ಅನುಮೋದಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಪಾಲು ಬಂಡವಾಳದ ಮೇಲೆ
ಶೇಕಡಾ 15 ರಷ್ಟು ಡಿವಿಡೆಂಡ್ ಘೋಷಿಸಿರುತ್ತದೆ. 2025 ರ ಮಾರ್ಚ್ ಅಂತ್ಯಕ್ಕೆ 193 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ್ದು ರೂ.181 ಕೋಟಿ ಸದಸ್ಯರಿಗೆ ಸಾಲ ವಿತರಿಸಿದೆ. ವಸೂಲಾತಿಯಲ್ಲಿಯೂ ದಾಖಲೆ ಹೊಂದಿದ್ದು, 891 ಕೋಟಿ ರೂಪಾಯಿಗೂ ಮೀರಿ ವಾರ್ಷಿಕ ವ್ಯವಹಾರ ಮಾಡಿರುತ್ತದೆ ಎಂದು ಸಭೆಗೆ ತಿಳಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ
ಅಧ್ಯಕ್ಷರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಶ್ರೀ ರವಿರಾಜ್ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು. ನಮ್ಮ ಸಂಘದ 10 ಜನ ಹಿರಿಯ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ ನಮ್ಮ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಅಭಿವಂದನೆ ಸಲ್ಲಿಸಲಾಯಿತು.
ಶಾಖಾ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ
ಮತ್ತು ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ
ಸದಸ್ಯರ 9 ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರತಿಭಾ ಪುರಸ್ಕಾರ
ಮಾಡಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಸಂಘದ ಮುದ್ರಣ ಘಟಕ ನಿಟ್ಟೂರಿನಲ್ಲಿ ಎಲ್ಲಾ ತರಹದ
ಸಹಕಾರ ಸಂಘ, ಸೌಹಾರ್ದ ಸೊಸೈಟಿ ಹಾಗೂ ಸಹಕಾರಿ ಬ್ಯಾಂಕ್ಗಳಿಗೆ ಬೇಕಾಗುವ ಎಲ್ಲಾ ತರಹದ ಪುಸ್ತಕ, ಫಾರ್ಮುಗಳು ಇತ್ಯಾದಿ ಮುದ್ರಣ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಹಾಗೂ ರಿಯಾಯಿತಿ ದರದಲ್ಲಿ ಮುದ್ರಿಸಿ ಕೊಡುವ ಬಗ್ಗೆ ತಿಳಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಎಮ್. ಗಣೇಶ್ ಕಿಣಿ,
ನಿರ್ದೇಶಕರಾದ ಶ್ರೀಮತಿ ಇಂದು ರಮಾನಂದ ಭಟ್, ನಾರಾಯಣ ಬಲ್ಲಾಳ್, ಎಲ್. ಉಮಾನಾಥ, ಶ್ರೀ ದೇವದಾಸ್ ಶೆಟ್ಟಿಗಾರ್, ಯಶವಂತ ನಾಯಕ್, ರಾಧಾಕೃಷ್ಣ ಶೆಣೈ, ಶ್ರೀಮತಿ
ಮೀನಾ ಕುಮಾರಿ ಯು. , ಶ್ರೀಮತಿ ಶ್ವೇತಾ ಜೆ. ಶೆಟ್ಟಿ, ಅಬ್ದುಲ್ಲಾ ಎಚ್. ಸಾಹೇಬ್ , ಅರುಣ್ ಟಿ. ಶೆಟ್ಟಿ, ಸುರೇಶ್ ನಾಯ್ಕ್,
ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರು ಹಾಗೂ ಸಹಕಾರ
ಮಹಾ ಮಂಡಳ-ಬೆಂಗಳೂರು ಇದರ ನಿರ್ದೇಶಕರಾದ
ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಉಪಸ್ಥಿತರಿದ್ದು, ಸಂಘದ
ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ
ಸಂಘದ ಉಪಾಧ್ಯಕ್ಷರಾದ ಎಮ್. ಗಣೇಶ್ ಕಿಣಿಯವರು
ಧನ್ಯವಾದ ಸಮರ್ಪಣೆ ಮಾಡಿದರು.
















