ರೈಲುಮಾರ್ಗದಲ್ಲಿ ವಿದ್ಯುತ್ ಕಾಮಗಾರಿ: ಡಿಸೆಂಬರ್ ವರೆಗೂ ಈ ದಾರಿಯಲ್ಲಿ ಹಗಲು ರೈಲು ಇಲ್ಲ!

ಮಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ರೋಡ್‌ ನಡುವೆ ಘಾಟಿ ಪ್ರದೇಶದಲ್ಲಿ ವಿದ್ಯುತ್‌ ಮಾರ್ಗ ಕಾಮಗಾರಿಗಾಗಿ ಡಿ. 15ರ ವರೆಗೆ ಲೈನ್‌ ಬ್ಲಾಕ್‌ ಮಾಡುವ ನೈಋತ್ಯ ರೈಲ್ವೇ ಪ್ರಸ್ತಾವವನ್ನು ರೈಲ್ವೇ ಸಚಿವಾಲಯ ಅನುಮೋದಿಸಿದೆ. ಇದರಿಂದಾಗಿ ಬಹುತೇಕ ಹಗಲು ರೈಲುಗಳ ರದ್ಧತಿ ವಿಸ್ತರಣೆಗೊಂಡಿದೆ.

ನಂ.16539 ಯಶವಂತಪುರ-ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ರೈಲು ಡಿ.13ರ ವರೆಗೆ, ನಂ.16540 ಮಂಗಳೂರು ಜಂಕ್ಷನ್‌ ಯಶವಂತಪುರ ಸಾಪ್ತಾಹಿಕ ರೈಲು ಡಿ.14ರ ವರೆಗೆ, 16575 ಯಶವಂತಪುರ-ಮಂಗಳೂರು ಜಂಕ್ಷನ್‌ ಟ್ರೈವೀಕ್ಲಿ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ಡಿ.14ರ ವರೆಗೆ, 16576 ಮಂಗಳೂರು ಜಂಕ್ಷನ್‌ ಯಶವಂತಪುರ ಟ್ರೈ ವೀಕ್ಲಿ ಗೊಮ್ಮಟೇಶ್ವರ ಎಕ್ಸ್‌ ಪ್ರಸ್‌ ಡಿ.15ರ ವರೆಗೆ ರದ್ದತಿ ವಿಸ್ತರಣೆಯಾಗಿದೆ.16515 ಯಶವಂತಪುರ ಕಾರವಾರ ಟ್ರೈ ವೀಕ್ಲಿ ಡಿ.15, 16516 ಕಾರವಾರ ಯಶವಂತಪುರ ಟ್ರೈ ವೀಕ್ಲಿ ರೈಲು ರದ್ಧತಿ ಡಿ.16ರ ವರೆಗೆ ವಿಸ್ತರಣೆಯಾಗಿದೆ.