ಉಡುಪಿ: ಕಾಪು ತಾಲೂಕಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನುಮತಿ ಪಡೆಯದೇ ಯಾವುದೇ
ಅಂಗಡಿಗಳಲ್ಲಿ ಸುಡುಮದ್ದು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಅನಧಿಕೃತವಾಗಿ ಅನುಮತಿ ಪಡೆಯದೇ ಸುಡುಮದ್ದು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ತೆರೆಯಲು ಅನುಮತಿ ಕೋರಿ ಸೆಪ್ಟಂಬರ್ 26 ರ ಒಳಗಾಗಿ ಕಾಪು ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾಪು ತಹಶೀಲ್ದಾರರ ಕಚೇರಿ
ಪ್ರಕಟಣೆ ತಿಳಿಸಿದೆ.


















