ಜನರಿಗೆ ಸಮಾಧಾನ ಇಲ್ಲದಿದ್ದರೆ ಪಟ್ಟಣ ಪಂಚಾಯತಿ ಬೇಡ: ಸಂಸದ ಬಿ.ವೈ. ರಾಘವೇಂದ್ರ

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ವಿಚಾರದಲ್ಲಿ ರಾಜಕೀಯ ಜಟಾಪಟಿ ತೀವ್ರಗೊಂಡಿದ್ದು, ಶಾಸಕ ಗಂಟೆಹೊಳೆ ಹಾಗೂ ದೀಪಕ್ ಕುಮಾರ್ ಶೆಟ್ಟಿ ಪರಸ್ಪರ ತಳ್ಳಾಡಿಕೊಂಡ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಬೈಂದೂರು ಪಟ್ಟಣ ಪಂಚಾಯತನ್ನು ನಮ್ಮ ಸರ್ಕಾರ ಇದ್ದಾಗ ಒಳ್ಳೆಯ ಉದ್ದೇಶದಿಂದ ರಚನೆ ಮಾಡಿದ್ದೆವು. ಆದರೆ ಜನರಿಗೆ ಸಮಾಧಾನ ಇಲ್ಲದಿದ್ದರೆ, ಪಟ್ಟಣ ಪಂಚಾಯತಿ ಬೇಡವೆಂದು ಹೇಳಿದರೆ, ನಾನು ಅದಕ್ಕೆ ಬೆಂಬಲಿಸುತ್ತೇನೆ” ಎಂದಿದ್ದಾರೆ.

“ಭವಿಷ್ಯದ ಅಭಿವೃದ್ಧಿಗೆ ಪಟ್ಟಣ ಪಂಚಾಯತ್ ಬೇಕೆಂಬ ಆಶಯದಿಂದ ನಾವು ರಚನೆ ಮಾಡಿದ್ದೆವು. ಆದರೆ ಗ್ರಾಮಾಂತರ ಭಾಗದ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜನರೇ ನಿರ್ಧರಿಸಬೇಕು” ಎಂದು ಹೇಳಿದರು.
ಸಂಸದರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, “ಅವರಿಗೆ ಒಳ್ಳೆಯದಂತೂ ಮಾಡಲು ಆಗಲ್ಲ. ನಮ್ಮ ಕಾರ್ಯಕರ್ತರೇ ಬೈಂದೂರಿನ ಭವಿಷ್ಯ ಬರೆಯುವವರು ಎಂದು ಹೇಳಿದ್ದಾರೆ.
ಇದರಿಂದ ಬೈಂದೂರು ಪಟ್ಟಣ ಪಂಚಾಯತ್ ಮುಂದಿನ ಭವಿಷ್ಯ ಕುರಿತು ಜನಾಭಿಪ್ರಾಯವೇ ತೀರ್ಮಾನಕಾರಿ ಆಗಲಿದೆ ಎಂದರು.