ಯವತ್ಮಾಲ್: 17 ವರ್ಷದ ವಿದ್ಯಾರ್ಥಿನಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕನನ್ನು ಬಂಧಿಸಿರು ಘಟನೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.
ಗರ್ಭಪಾತ ಮಾಡಿಸುವ ವೇಳೆ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಒಂಬತ್ತು ತಿಂಗಳ ಕಾಲ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಶೋಷಿಸಿದ ಮತ್ತು ಗರ್ಭಿಣಿಯನ್ನಾಗಿಸಿದ್ದ 27 ವರ್ಷದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ದೂರಿನ ಪ್ರಕಾರ, ಟ್ಯೂಷನ್ ನೀಡಿದ್ದ ಆರೋಪಿ, ವಿದ್ಯಾರ್ಥಿನಿಯ ಸ್ನೇಹ ಬೆಳೆಸಿಕೊಂಡು ಕಳೆದ ಒಂಬತ್ತು ತಿಂಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.


















