ರಾಜ್ಯದಲ್ಲಿ ಸಿನಿಮಾಗಳಿಗೆ 200 ರೂ. ಏಕರೂಪ ದರ ನಿಗದಿ: ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಮಲ್ಟಿಪ್ಲೆಕ್ಸ್​ ಸೇರಿದ ರಾಜ್ಯ ಎಲ್ಲಾ ಚಿತ್ರಮಂದಿರಗಳಲ್ಲಿ ತೆರಿಗೆ ಹೊರತುಪಡಿಸಿ ಎಲ್ಲಾ ಭಾಷೆಯ ಸಿನಿಮಾಗಳಿಗೆ 200 ರೂಪಾಯಿಯ ಏಕರೂಪದ ದರದ ಟಿಕೆಟ್​ ನಿಗದಿಪಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಮಂಗಳವಾರ (ಸೆ.23) ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಕಂಬೈನ್ಸ್​, ಮಲ್ಟಿಪ್ಲೆಕ್ಸ್​ ಅಸೋಷಿಯೇಷನ್ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸದರಿ ವಿಚಾರಣೆ ನಡೆಸಿರುವ ಕೋರ್ಟ್​ ಸರ್ಕಾರದ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ.ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು 2014 ರ ತಿದ್ದುಪಡಿಯ ಭಾಗವಾಗಿ ಸೆ. 12ರಂದು ಕರ್ನಾಟಕ ಸರ್ಕಾರ ಹೊಸ ನಿಯಮವಾಗಿ ಸಿನಿಮಾ ಟಿಕೆಟ್‌ಗಳ ಬೆಲೆಯನ್ನು 200 ರೂ.ಗಳಿಗೆ ಮಿತಿಗೊಳಿಸುವ ಆದೇಶವನ್ನು ಜಾರಿಗೊಳಿಸಿತ್ತು.

ಸ್ಟಾರ್​ ನಟರ ಸಿನಿಮಾ, ಬೇರೆ ಭಾಷೆಯ ಸಿನಿಮಾ ಬಿಡುಗಡೆಯಾದೆರೆ ಟಿಕೆಟ್ ದರ ಇದ್ದಕ್ಕಿದ್ದಂತೆ ವಿಪರಿತವಾಗಿ ಹೆಚ್ಚಾಗುತ್ತಿತ್ತು. ಮಧ್ಯಮ ವರ್ಗ ಮತ್ತು ಬಡವರು ಅಷ್ಟೊಂದು ಬೆಲೆ ಕೊಟ್ಟು ಸಿನಿಮಾ ನೋಡುವುದು ದುಷ್ತರವಾಗಿತ್ತು. ಈ ಎಲ್ಲಾ ಕೋನಗಳಿಂದ ರಾಜ್ಯ ಸರ್ಕಾರ ಟಿಕೆಟ್ ದರಕ್ಕೆ ಮೀತಿ ಹೇರಿತ್ತು.