ಉಡುಪಿ: ಕಿನ್ನಿಮುಲ್ಕಿಯ ಅಶಕ್ತ ಕುಟುಂಬದ ವೈದ್ಯಕೀಯ ನೆರವಿಗಾಗಿ ಶ್ರೀ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ ಅವರು ವಿಭಿನ್ನವೇಶವನ್ನು ಧರಿಸಿ ಸಂಗ್ರಹವಾದ 2,50,764 ಮೊತ್ತದ ಚೆಕ್ ಅನ್ನು ಕಿನ್ನಿಮುಲ್ಕಿಯ ನಿವಾಸದಲ್ಲಿ ವಿಜಯಲಕ್ಷ್ಮಿ ಸಿ ಬಂಗೇರ ಅವರ ಕುಟುಂಬಕ್ಕೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶಾಂತರಾಮ್ ಶೆಟ್ಟಿ, ಉಡುಪಿ ಟೌನ್ ಸ್ಟೇಷನ್ ನ ಪಿಎಸ್ಐ ಭರಥೇಶ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.


















