ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ: ಶಿಕ್ಷಣ ಇಲಾಖೆ ಆದೇಶ.

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕೇಂದ್ರ ಕಚೇರಿ, 6 ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಹಾಗೂ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಆಧಾರ್ ಸಹಿತ ಬಯೋಮೆಟ್ರಿಕ್ ಹಾಜರಾತಿಯನ್ನು ಜಾರಿಗೊಳಿಸುತ್ತಿದೆ.ಈ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಅತಿಥಿ ಉಪನ್ಯಾಸಕರು ತಮ್ಮ ವೈಯಕ್ತಿಕ ವಿವರಗಳನ್ನು ಇಲಾಖೆ ಪೋರ್ಟಲ್‌ನಲ್ಲಿ ಸೆ.30ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮೊಬೈಲ್ ಆೃಪ್‌ಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು. ಇಲಾಖೆ ವ್ಯಾಪ್ತಿಯ ಪ್ರತಿ ಕಚೇರಿ ಹಾಗೂ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಂಪೂರ್ಣವಾಗಿ ನೋಡಿಕೊಳ್ಳುವ ಸಲುವಾಗಿ ಒಬ್ಬರು ಅಧಿಕಾರಿ/ಬೋಧಕರನ್ನು ನೋಡಲ್ ಅಡ್ಮಿನ್ ಆಗಿ ನೇಮಿಸಿ ಅವರ ವಿವರಗಳನ್ನು ಗೂಗಲ್ ಾರಂನಲ್ಲಿ ದಾಖಲಿಸಬೇಕು.

ಈ ಗೂಗಲ್ ರಾರಂ ನಲ್ಲಿ ನೋಡಲ್ ಅಡ್ಮಿನ್ ಇ-ಮೇಲ್ ಅನ್ನುವ ಜಾಗದಲ್ಲಿ ಕಾಲೇಜಿನ ಇ-ಮೇಲ್ ಯಡಿಯನ್ನು ನಮೂದಿಸಬೇಕು. ಹಾಗೆಯೇ ಎಲ್ಲ ಕಚೇರಿ ವತ್ತು ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಉಪಕರಣವನ್ನು ಖರೀದಿಸವುಂತೆ ಸೂಚಿಸಲಾಗಿದೆ.