ಉಡುಪಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ-ಸಹಾಯಧನ ಯೋಜನೆಯಡಿ ವೆಬ್‌ಸೈಟ್ https://www.ksbdb.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹಸು ಸಾಕಾಣಿಕೆ, ಗುಡಿ ಹಾಗೂ ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ನಡೆಸಲು ಶೇ.4 ರ ವಾರ್ಷಿಕ ಬಡ್ಡಿ ದರದಲ್ಲಿ 1 ಲಕ್ಷದವರೆಗಿನ ಘಟಕ ವೆಚ್ಚ ಹೊಂದಿರುವ ವ್ಯಾಪಾರಕ್ಕೆ 20,000 ರೂ ಸಹಾಯಧನ ಮತ್ತು 80,000 ರೂ ಉಳಿಕೆ ಸಾಲದ ಮೊತ್ತ ಹಾಗೂ 2 ಲಕ್ಷದವರೆಗಿನ ಘಟಕ ವೆಚ್ಚ ಹೊಂದಿರುವ ವ್ಯಾಪಾರಕ್ಕೆ 40,000 ರೂ ಸಹಾಯಧನ ಮತ್ತು 1,60,000 ರೂ ಉಳಿಕೆ ಸಾಲದ ಮೊತ್ತದೊಂದಿಗೆ ಆರ್ಥಿಕ ನೆರವು ನೀಡಲಾಗುವುದು.
ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8762249230 ಅಥವಾ 8029605888 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


















