ಉಡುಪಿ: ತನ್ನ ಕುರಿತಾದ ಸುಳ್ಳಾರೋಪದಿಂದ ಬೇಸತ್ತು ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಣ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಟಪಾಡಿ ಸಮೀಪದ ಸುಭಾಷ್ ನಗರ ಎಂಬಲ್ಲಿ ರವಿವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಸುಭಾಷ್ ನಗರ ನಿವಾಸಿ ಶೇಕ್ ಅಬ್ದುಲ್ಲಾ(38) ಎಂದು ಗುರುತಿಸಲಾಗಿದೆ.
ತನ್ನ ಸಾವಿಗೆ ಕಾರಣ ಮಿಸಾಲ್, ಮಿಸಾಲ್ ನ ತಾಯಿ ಮತ್ತು ತಂಗಿ ಎಂಬುದಾಗಿ ಶೇಕ್ ಅಬ್ದುಲ್ಲಾ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತನ್ನ ತಮ್ಮನ ಸಾವಿಗೆ ಈ ಮೂವರು ಮಾಡಿರುವ ಸುಳ್ಳು ಆರೋಪವೇ ಕಾರಣ ಎಂಬುದಾಗಿ ಮೃತರ ಸಹೋದರ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












