ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ತೋಷಿತ್ ಎಸ್ ಬಾಬು 50ಮೀ ಮತ್ತು 100ಮೀ ಫ್ರೀಸ್ಟೈಲ್‍ನಲ್ಲಿ ಪ್ರಥಮ ಹಾಗೂ 50ಮೀ ಬ್ರೆಸ್ಟ್‍ಸ್ಟ್ರೋಕ್‍ಲ್ಲಿ ದ್ವಿತೀಯ, ಸುಯಾಶ್ ಎನ್ ಹೆಗ್ಡೆ 100ಮೀ ಬಟರ್‍ಫ್ಲೈಲ್ಲಿನಲ್ಲಿ ಪ್ರಥಮ ಹಾಗೂ 100ಮೀ ಫ್ರೀಸ್ಟೈಲ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು, ಶಶಾಂಕ್ ವಿ 50ಮೀ ಬಟರ್‍ಫ್ಲೈನಲ್ಲಿ ಪ್ರಥಮ ಮತ್ತು 400ಮೀ ಫ್ರೀಸ್ತೈಲ್‍ನಲ್ಲಿ ತೃತೀಯ ಸ್ಥಾನವನ್ನು, ಯು.ಭಕ್ತಿ 50ಮೀ. ಮತ್ತು 100ಮೀ ಬ್ರೆಸ್ಟ್‍ಸ್ಟ್ರೋಕ್‍ನಲ್ಲಿ ಪ್ರಥಮ ಸ್ಥಾನವನ್ನು, ಶ್ರೇಯಾ ಎಸ್.ಆರ್.ಯು 50ಮೀ. ಮತ್ತು 100ಮೀ ಫ್ರೀಸ್ಟೈಲ್‍ನಲ್ಲಿ ಪ್ರಥಮ ಸ್ಥಾನವನ್ನು ಹಾಗೂ 4×100ಮೀ ರಿಲೆಯಲ್ಲಿ ಕಾರ್ಕಳ ಜ್ಞಾನಸುಧಾ ತಂಡವು ಪ್ರಥಮ ಸ್ಥಾನವನ್ನು ಪಡೆದು ಈ ಮೂಲಕ ದಿಗಂತ್ ಎಚ್ ಸೇರಿದಂತೆ ಒಟ್ಟು 6 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.












