ಪ್ರತಿ ದಿನ ₹333 ಉಳಿಸಿದ್ರೆ ₹ 17 ಲಕ್ಷ ಗಳಿಸ್ತೀರಿ :ಅಂಚೆ ಇಲಾಖೆಯ ಈ ಬೊಂಬಾಟ್ ಯೋಜನೆ ಬಗ್ಗೆ ನಿಮಗೆ ಗೊತ್ತಾ!

ಆರ್ ಡಿ ಮಾಡಿ ಪಡೆಯಿರಿ ಅತ್ಯುತ್ತಮ ಉಳಿತಾಯ:

‘ಮರುಕಳಿಸುವ ಠೇವಣಿ’ ಅಂದರೆ ರೆಕರಿಂಗ್ ಡೆಪಾಸಿಟ್ (RD) ಯೋಜನೆಯಲ್ಲಿ ನೀವು. ತಿಂಗಳಿಗೆ ಕೇವಲ ₹100 ರಿಂದ ಹೂಡಿಕೆ ಆರಂಭಿಸಬಹುದು. ಈ ಯೋಜನೆಯಲ್ಲಿ, ನೀವು ದಿನಕ್ಕೆ ₹333 ಉಳಿಸುವ ಮೂಲಕ ಬರೋಬ್ಬರಿ ₹17 ಲಕ್ಷದಷ್ಟು ದೊಡ್ಡ ಮೊತ್ತವನ್ನು ಗಳಿಸಬಹುದು!  ಪೋಸ್ಟ್ ಆಫೀಸ್ RD ಯೋಜನೆಯು ಒಂದು ಅತ್ಯುತ್ತಮ  ಉಳಿತಾಯದ ಶಕ್ತಿ. ಇದರಲ್ಲಿ ನೀವು ಪ್ರತಿ ತಿಂಗಳು ಒಂದು ನಿಗದಿತ ಮೊತ್ತವನ್ನು ಠೇವಣಿ ಇಡುತ್ತಾ ಹೋಗಬೇಕು.

ಬಡ್ಡಿ ಹೇಗೆ: ಸದ್ಯ ಈ ಯೋಜನೆ ವಾರ್ಷಿಕ ಶೇ. 6.7 ರಷ್ಟು ಸ್ಥಿರ ಬಡ್ಡಿದರವನ್ನು ನೀಡುತ್ತಿದೆ. ಭಾರತದ ಯಾವುದೇ ನಾಗರಿಕ ಈ ಖಾತೆಯನ್ನು ತೆರೆಯಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳು ಕೂಡ ಪೋಷಕರ ನೆರವಿನಿಂದ ಖಾತೆ ತೆರೆಯಬಹುದು.ಮಕ್ಕಳಿಗೂ ಇದರಿಂದ ಉಳಿತಾಯದ ಪಾಠ ಕಲಿಸಬಹುದು.

ಮೆಚ್ಯೂರಿಟಿ ಅವಧಿ: ಈ ಯೋಜನೆಯ ಅವಧಿ 5 ವರ್ಷಗಳು. ನಿಮಗೆ ಇಷ್ಟವಿದ್ದರೆ, ಇನ್ನೂ 5 ವರ್ಷಗಳ ಕಾಲ ವಿಸ್ತರಿಸುವ ಅವಕಾಶವೂ ಇದೆ.ಹಾಗಾಗಿ ಇಷ್ಟು ವರ್ಷದಲ್ಲಿ ನೀವು ಬಹಳಷ್ಟನ್ನು ಉಳಿಸಬಹುದು

ಠೇವಣಿ ನಿಯಮಗಳೇನು?

ನೀವು ತಿಂಗಳ 15ನೇ ತಾರೀಖಿನೊಳಗೆ ಖಾತೆ ತೆರೆದರೆ, ಪ್ರತಿ ತಿಂಗಳು 15ರ ಒಳಗೆ ಹಣ ಕಟ್ಟಬೇಕು. 16ನೇ ತಾರೀಖಿನ ನಂತರ ಖಾತೆ ತೆರೆದರೆ, ತಿಂಗಳ ಕೊನೆಯ ದಿನದೊಳಗೆ ಹಣ ಕಟ್ಟಬಹುದು. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಬಿದ್ದರೆ, 3 ವರ್ಷಗಳ ನಂತರ ಖಾತೆಯನ್ನು ಅವಧಿಗೆ ಮುನ್ನವೇ ಮುಚ್ಚುವ ಆಯ್ಕೆಯೂ ಇದೆ.

xr:d:DAFuHN6EnOY:7,j:7575457119040044411,t:23091104

ಉಳಿತಾಯದಲ್ಲಿ  ₹17 ಲಕ್ಷ ಪಡೆಯುವುದು ಹೇಗೆ?

ಈಗ ಲೆಕ್ಕಾಚಾರದ ವಿಚಾರಕ್ಕೆ ಬರೋಣ.  ನೀವು ಪ್ರತಿದಿನ ₹333 ಉಳಿತಾಯ ಮಾಡಿದರೆ, ತಿಂಗಳ ನಿಮ್ಮ ಬಳಿ ಸುಮಾರು ₹10,000 ಸಂಗ್ರಹವಾಗುತ್ತದೆ. ಈ ₹10,000 ಅನ್ನು ನೀವು ಪ್ರತಿ ತಿಂಗಳು ಪೋಸ್ಟ್ ಆಫೀಸ್ RD ಖಾತೆಯಲ್ಲಿ ಠೇವಣಿ ಇಡುತ್ತಾ ಬಂದರೆ:

5 ವರ್ಷಗಳ ನಂತರ:

ನಿಮ್ಮ ಒಟ್ಟು ಹೂಡಿಕೆ: ₹6,00,000

ಶೇ. 6.7 ಬಡ್ಡಿದರದಂತೆ ನಿಮಗೆ ಸಿಗುವ ಬಡ್ಡಿ: ₹1,13,659

5 ವರ್ಷದ ಕೊನೆಯಲ್ಲಿ ನಿಮ್ಮ ಕೈ ಸೇರುವ ಒಟ್ಟು ಮೊತ್ತ: ₹7,13,659

ಈ ಯೋಜನೆಯನ್ನು ನೀವು ಇನ್ನೂ 5 ವರ್ಷಗಳಿಗೆ ವಿಸ್ತರಿಸಿದರೆ (ಒಟ್ಟು 10 ವರ್ಷ),

ನಿಮ್ಮ ಒಟ್ಟು ಹೂಡಿಕೆ: ₹12,00,000

10 ವರ್ಷಗಳಲ್ಲಿ ನಿಮಗೆ ಸಿಗುವ ಒಟ್ಟು ಬಡ್ಡಿ: ₹5,08,546

10 ವರ್ಷಗಳ ಕೊನೆಯಲ್ಲಿ ನಿಮ್ಮ ಕೈ ಸೇರುವ ಭರ್ಜರಿ ಮೊತ್ತ: ₹17,08,546

ಹೌದು, ಕೇವಲ ದಿನಕ್ಕೆ ₹333 ಉಳಿಸುವ ಮೂಲಕ ನೀವು 10 ವರ್ಷಗಳಲ್ಲಿ ₹17 ಲಕ್ಷಕ್ಕೂ ಹೆಚ್ಚು ಹಣ ನಿಮಗೆ ಸಿಗುತ್ತದೆ.ಅದಕ್ಕೋಸ್ಕರ ಇದೊಂದು ಅತ್ಯುತ್ತಮ ಯೋಜನೆ ಎನ್ನಲಾಗಿದೆ.

₹5,000 ಹೂಡಿಕೆ ಮಾಡಿದರೆ?

ತಿಂಗಳಿಗೆ ₹10,000  ಹೂಡಿಕೆ ಮಾಡೋದು ಎಲ್ಲರಿಗೂ ಕಷ್ಟ. ಆಗ  ತಿಂಗಳಿಗೆ ₹5,000 ಹೂಡಿಕೆ ಮಾಡಿದರೂ ಸಾಕು ನೀವು ಉತ್ತಮ ಲಾಭ ಪಡೀಬಹುದು. 10 ವರ್ಷಗಳ ಕಾಲ ನೀವು ಪ್ರತಿ ತಿಂಗಳು ₹5,000 ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ ₹6 ಲಕ್ಷ ಆಗುತ್ತದೆ ಮತ್ತು ಅದರ ಮೇಲೆ ಬಡ್ಡಿ ಸೇರಿ ನಿಮ್ಮ ಕೈಗೆ ಒಟ್ಟು ₹8,54,272 ಸಿಗುತ್ತದೆ. ನೋಡಿ ಉಳಿತಾಯ ಮಾಡಲು ಅಂಚೆ ಇಲಾಖೆ ನಿಮಗೋಸ್ಕರ ಒಳ್ಳೆಯ ದಾರಿ ತೋರಿಸಿದೆ. ಉಳಿತಾಯ ಮಾಡಿ ಲಾಭ ಗಳಿಸುವ ಯೋಚನೆಯಲ್ಲಿದ್ದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಹೋಗಿ ಖಾತೆ ತೆರೀರಿ.