ಉಡುಪಿ: ಶ್ರೀ ಕ್ಷೇತ್ರ ಮಂದಾರ್ತಿ, ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ವಿಶೇಷ ಪೂಜಾ ಸಮಾರಂಭವು ಸೆ. 22 ರಿಂದ ಅ.02 ರ ವರೆಗೆ ನಡೆಯಲಿದ್ದು, ಸೆ. 29, ಸೋಮವಾರ ಮೂಲ ನಕ್ಷತ್ರ ದಿನ ದೇವಳದ ವತಿಯಿಂದ ಚಂಡಿಕಾಯಾಗ ಜರಗಲಿರುವುದು.

ನವರಾತ್ರಿಯ ಈ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ, ತನು-ಮನ-ಧನ-ಧಾನ್ಯಾದಿಗಳ ಅರ್ಪಣೆಯೊಂದಿಗೆ ಸಹಕರಿಸಿ, ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಅಮ್ಮನವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ.
ಗೋವಿಂದ ನಾಯ್ಕ ಡಿ.ಟಿ
ಕಾರ್ಯನಿರ್ವಹಣಾಧಿಕಾರಿ
ಹೆಚ್. ಧನಂಜಯ ಶೆಟ್ಟಿ
ಅಧ್ಯಕ್ಷರು
ಹೆಚ್. ಪ್ರಭಾಕರ ಶೆಟ್ಟಿ
ಅನುವಂಶಿಕ ಮುಕ್ತೇಸರರು
ಆರ್. ಶ್ರೀನಿವಾಸ ಶೆಟ್ಟಿ
ಅನುವಂಶಿಕ ಮುಕ್ತೇಸರರು
ಹೆಚ್. ಶಂಭು ಶೆಟ್ಟಿ
ಅನುವಂಶಿಕ ಮುಕ್ತೇಸರರು
ಹೆಚ್. ಜಯರಾಮ ಶೆಟ್ಟಿ
ಅನುವಂಶಿಕ ಮುಕ್ತೇಸರರು.
ಸೂಚನೆ:
- ಶ್ರೀ ಕ್ಷೇತ್ರದ ವತಿಯಿಂದ ಐದು ದಶಾವತಾರ ಯಕ್ಷಗಾನ ಮೇಳಗಳನ್ನು ನಡೆಸುತ್ತಿದ್ದು, ಈಗಾಗಲೇ 2046-2047ನೇ ಇಸವಿಯ ತನಕ ಯಕ್ಷಗಾನ ಸೇವೆ ಕಾಯ್ದಿರಿಸಲ್ಪಟ್ಟಿದೆ. ಹರಕೆ ಸೇವೆ ಆಟ ಆಡಿಸುವ ಭಕ್ತಾದಿಗಳು ತಮ್ಮ ಹೆಸರನ್ನು ದೇವಸ್ಥಾನದ ಕಛೇರಿಯಲ್ಲಿ ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ.
- ಭಕ್ತಾದಿಗಳ ಬೇಡಿಕೆಗೆ ಅನುಗುಣವಾಗಿ ಶೀಘ್ರವಾಗಿ ಯಕ್ಷಗಾನ ಸೇವೆಯ ಅವಕಾಶ ನೀಡುವ ಸಲುವಾಗಿ ಮಳೆಗಾಲದಲ್ಲಿ ಶ್ರೀಕ್ಷೇತ್ರದಲ್ಲಿ ಎರಡು ಮೇಳಗಳಿಂದ ಸೇವೆ ಆಟವನ್ನು ಪೂರೈಸುತ್ತಿದ್ದು, ಹೆಚ್ಚಿನ ಮಾಹಿತಿ ಬಗ್ಗೆ ಶ್ರೀ ದೇವಳದ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು.
- ಶ್ರೀ ದೇವಸ್ಥಾನದ ವತಿಯಿಂದ ಯಾವುದೇ ಚಿಕ್ಕ ಮೇಳಗಳನ್ನು ನಡೆಸುತ್ತಿಲ್ಲ.
- ಕಾಣಿಕೆ ಹಾಗೂ ಜೀರ್ಣೋದ್ಧಾರದ ಬಗ್ಗೆ ಧನ ಸಹಾಯದ ವಸೂಲಿಗಾಗಿ ದೇವಸ್ಥಾನದ ವತಿಯಿಂದ ಅಧಿಕೃತವಾಗಿ ಯಾರನ್ನು ನೇಮಿಸಿಲ್ಲ. ಬೇರೆ ಯಾರ ಹಸ್ತವೂ ದೇವಸ್ಥಾನದ ಬಗ್ಗೆ ಹಣವನ್ನು ಕೊಡಬಾರದಾಗಿ ವಿನಂತಿ.
- ಭಕ್ತಾದಿಗಳಿಂದ ದೇವಸ್ಥಾನದಲ್ಲಿ ನಿತ್ಯ ನಡೆಯುವ ಅನ್ನದಾನ ಮತ್ತು ಅಭಿವೃದ್ಧಿ ಕಾರ್ಯಕ್ಕೆ ದೇಣಿಗೆ ಹಣವನ್ನು ಹಾಗೂ ಹಸಿರುವಾಣಿ ಹೊರೆಯನ್ನು ಆದರಪೂರ್ವಕವಾಗಿ ಸ್ವೀಕರಿಸಲಾಗುವುದು.
- ಶ್ರೀ ದೇವಳದಲ್ಲಿ ಒಂದು ದಿನದ ಅನ್ನಸಂತರ್ಪಣೆ ಸೇವೆಗೆ ರೂ. 30,000/-ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
- ಶ್ರೀ ಕ್ಷೇತ್ರದಲ್ಲಿ ನಡೆಯುವ ಚಂಡಿಕಾಶಾಂತಿ,ದುರ್ಗಾಶಾಂತಿ, ದೀಪನಮಸ್ಕಾರ, ರಂಗಪೂಜೆ ಹಾಗೂ ಆದಿಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಡೆಯುವ ವಿಶೇಷ ಪೂಜೆಗಳ ಬಗ್ಗೆ ಶ್ರೀ ದೇವಸ್ಥಾನದ ಕಛೇರಿಯಲ್ಲಿ ವಿಚಾರಿಸಿ ಹೆಸರನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ.
- ಶ್ರೀ ದೇವಿಯ ಸನ್ನಿಧಿಯಲ್ಲಿ ರಥೋತ್ಸವದ ದಿನ ಹೊರತು ಪಡಿಸಿ ಪ್ರತಿ ದಿನ ತುಲಾಭಾರ ಸೇವೆಯು ನಡೆಯುತ್ತದೆ. ತುಲಾಭಾರ ಸೇವೆಯ ಬಾಬ್ತು ಭಜಕರು ಅಕ್ಕಿ, ಕಾಯಿ, ಭಾರ್ದಡೆ ಸೊತ್ತುಗಳನ್ನು ಮೌಲ್ಯ ಪಾವತಿಸಿ ಶ್ರೀ ದೇವಸ್ಥಾನದಿಂದ ಪಡೆಯಬಹುದು.
- ವಿಜಯದಶಮಿ ದಿನ ಶ್ರೀ ದೇವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ 1.00ರ ತನಕ ಮಕ್ಕಳಿಗೆ ಅಕ್ಷರಾಭ್ಯಾಸ ಸೇವೆ ಮಾಡಿಸಲು ಅವಕಾಶವಿದೆ.












