ಉಡುಪಿ:2015ರಲ್ಲಿ ಪ್ರಾರಂಭವಾದ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ಸಾಗಿ 10 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, 2024-25ನೇ ವಾರ್ಷಿಕ ವರದಿಯು ದಿನಾಂಕ 13-09-2025ರಂದು ಶ್ರೀಮತಿ. ಸುಮಿತ್ರ ಆರ್ ಇವರ ಸಭಾಧ್ಯಕ್ಷತೆಯಲ್ಲಿ ಪುರಭವನದ ಮಿನಿ ಹಾಲ್ ನಲ್ಲಿ ಜರಗಿತು.
2024-25ನೇ ಸಾಲಿನಲ್ಲಿ ಸಂಘವು 107 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ವರದಿ ವರ್ಷಾಂತ್ಯಕ್ಕೆ 53 ಲಕ್ಷ ಪಾಲು ಬಂಡವಾಳ, 29 ಕೋಟಿ 84 ಲಕ್ಷ ಠೇವಣಿಯೊಂದಿಗೆ 24 ಕೋಟಿ 44 ಲಕ್ಷ ಹೊರಬಾಕಿ ಸಾಲ ಇರುತ್ತದೆ. ವರ್ಷಾಂತ್ಯಕ್ಕೆ 46,30,377.62 ಲಾಭಹೊಂದಿದ್ದು, ಸದಸ್ಯರಿಗೆ 13% ಪಾಲು ಮುನಾಫೆ ಘೋಷಣೆ ಮಾಡಲಾಯಿತು.
ಪ್ರತಿ ವರ್ಷದಂತೆ ಸದಸ್ಯರ ಮಕ್ಕಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿ ಯು ಸಿ.ಯಲ್ಲಿ ಉತ್ತಮ ಅಂಕ ಪಡೆದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಹಾಗೂ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಾಗೂ ಪ್ರೌಢಶಾಲಾ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಶ್ರೀಮತಿ. ಸರಸ್ವತಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ಸಂಘದ ಹಿರಿಯ ಸಹಕಾರಿ ಸದ್ಯಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಶ್ರೀ. ಬ್ಯಾಪ್ಟಿಸ್ ಡಯಾಸ್, ನಿರ್ದೇಶಕರಾದ ಶ್ರೀ.ಮೋಹನ್ ದೇವಾಡಿಗ, ಶ್ರೀ.ಜಯಸನಿಲ್, ಶ್ರೀ.ದೇವದಾಸ್ ಆರ್ ಸುವರ್ಣ, ಶ್ರೀಮತಿ ಗೀತಾ ನಾಗೇಶ್, ಶ್ರೀ. ಸ್ಟೀಫನ್ ಫೆರ್ನಾಂಡೀಸ್, ಶ್ರೀ. ವಸಂತ್ ಕುಮಾರ್. ಎಸ್ ಹಾಗೂ ಶ್ರೀ. ಜಾಯ್ ಜಾಕೋಬ್ ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕರಾದ ಶ್ರೀ.ಗಣೇಶ್ ಶೇರಿಗಾರ್ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಶ್ರೀ. ಆಶ್ವಿನ್ ಕೆ.ವಿ ವಂದಿಸಿದರು.












