ಉಡುಪಿ: ಸಾಹುಕಾರ ಕ್ಯಾನಿಂಗ್ ಪಿತ್ರೋಡಿ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಇದರ ಸಹಯೋಗದಲ್ಲಿ ಸೆ. 19.ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಶ್ರೀಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜು “ಕಾಯಾ ಚಿಕಿತ್ಸಾ ” ವಿಭಾಗದ ಸಹಯೋಗದೊಂದಿಗೆ ಆರೋಗ್ಯಕ್ಕಾಗಿ ಆಯುರ್ವೇದ ಇದರ ಬಗ್ಗೆ ಮಾಹಿತಿ ಶಿಬಿರ ಸಾಹುಕಾರ ಕ್ಯಾನಿಂಗ್ ಪಿತ್ರೋಡಿಯಲ್ಲಿ ನಡೆಯಿತು.
ಡಾ. ಶ್ರೇಯಶ್ರೀ ಅಸಿಸ್ಟೆಂಟ್ ಪ್ರೋಫೆಸರ್ ಇವರು ಸ್ವಸ್ಥ ಅರೋಗ್ಯ ದ ಬಗ್ಗೆ ಮಾಹಿತಿ ನೀಡುತ್ತಾ ಮದ್ಯಪಾನ, ಧೂಮಪಾನ ದುಶ್ಚಟ ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತಿದ್ದುಲ್ಲದೆ ದಿನ ನಿತ್ಯ ಬದುಕಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವಂತೆ ಸಲಹೆ ನೀಡಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಸಾಹುಕಾರ್ ಕ್ಯಾನಿಂಗ್ ಕಂಪನಿಯ ಮೇನೇಜಿಂಗ್ ಡೈರೆಕ್ಟರ್ ಹಾಗೂ ಲಯನ್ಸ್ ಕ್ಲಬ್ ಉದ್ಯಾವರದ ಅಧ್ಯಕ್ಷರಾದ ಗಣೇಶ್ ಯು, ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿಯಾದ ಕೃಷ್ಣಾ ಎಲ್, ನಿಕಟ ಪೂರ್ವ ಅಧ್ಯಕ್ಷರಾದ ಖಗಾಧರ ಕುಂದರ್, ಓಷನ್ ಸೀ ಫುಡ್ ನ ಮಾಲಕರಾದ ಸಂತೋಷ್ ಯು., ಡಾ. ಸ್ಪೂರ್ತಿ , ಹಾಗೂ ಲಯನ್ಸ್ ಕ್ಲಬ್ ಉದ್ಯಾವರದ ಸದಸ್ಯರುಗಳು ಉಪಸ್ಥಿತರಿದರು.
ಕಾರ್ಯದರ್ಶಿಗಳಾದ ನಾರಾಯಣ್ ಬಿ ಎಸ್, ಕಾರ್ಯಕ್ರಮ ನಿರೂಪಿಸಿ, ಧನ್ಯವಾದನಿತ್ತರು.


















