ಮಣಿಪಾಲ: ರೈಡ್ ಫಾರ್ ಲೈಫ್ ಎಂಬ ಶೀರ್ಷಿಕೆಯಡಿ ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಐಎಫ್‌ಎಂಆರ್ ಉಡುಪಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಂಗಾಂಗ ಮತ್ತು ಚರ್ಮದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಮೂರು ದಿನಗಳ ಬೈಕ್ ಜಾಥಾ ಆಯೋಜಿಸಲಾಗಿದೆ.
ಈ ಜಾಥಾ ಸೆ.18 ರಂದು ಮಣಿಪಾಲದಿಂದ ಆರಂಭವಾಗಿ ಸೆ.21 ರಂದು ಹಾಸನದಲ್ಲಿ ಸಂಪನ್ನಗೊಳ್ಳಲಿದೆ. ಮಣಿಪಾಲ ಕೆಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋ. ಅಮಿತ್ ಅರವಿಂದ್, ಸಹಾಯಕ ಗವರ್ನರ್ (ಜೋನ್ 4) ಜಾಥಾಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಅಧ್ಯಕ್ಷ ರೋ. ಡಾ. ದೀಪಕ್ ರಾಮ್ ಬಾಯಿರಿ ವಹಿಸಿದ್ದರು. ಈ ಸಂದರ್ಭದಲ್ಲಿ ರೋ. ಡಾ. ಅರುಣ್ ಹೆಗ್ಡೆ (ಜಿಲ್ಲಾ ಚೇರ್ ಮ್ಯಾನ್ – ಅಂಗಾಂಗ ಹಾಗೂ ಚರ್ಮದಾನ), ರೋ. ಡಾ. ಶ್ರೀಧರ್ (ವಲಯ ಸೇನಾನಿ), ಐಎಫ್‌ಎಂಆರ್ ಅಧ್ಯಕ್ಷ ರೋ. ಡಾ. ಮನೋಜ್ ನಾಗಸಂಪಿಗೆ ಹಾಗೂ ಉಭಯ ಸಂಘಗಳ ಕಾರ್ಯದರ್ಶಿಗಳಾದ ರೋ. ಮೋಹನ್ ನಾಯಕ್ ಮತ್ತು ರೋ. ವಾಸುದೇವ್ ಪೈ ಉಪಸ್ಥಿತರಿದ್ದರು.


















