ಕಾರ್ಕಳ: ಇಲ್ಲಿನ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಅಧ್ಯಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ
ಹೊಸ್ಮಾರಿನಲ್ಲಿರುವ ಲೀಲಾ ಫಾರ್ಮ್ಸ್ ಹಣ್ಣುಗಳ ತೋಟಗಾರಿಕಾ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು.

ಅಲ್ಲಿ ವಿವಿಧ ತಳಿಯ ದೇಶಿ ಮತ್ತು ವಿದೇಶಿ ಹಣ್ಣುಗಳು, ಅವುಗಳನ್ನು ಬೆಳೆಯುವ ವಿಧಾನ, ಕೊಯ್ಲು, ಸಂಸ್ಕರಣೆ ಹಾಗೂ ಮಾರುಕಟ್ಟೆಯ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.

ಲೀಲಾ ಫಾರ್ಮ್ಸ್ನ ಮಾಲಕರಾದ ಶಿವಾನಂದ ಶೆಣೈ ಹಾಗೂ ಅವರ ಪುತ್ರ ಶ್ರವಣ್ ಶೆಣೈ ತೋಟಗಾರಿಕಾ ವಿಧಾನಗಳ ಸಮಗ್ರ ಮಾಹಿತಿ ನೀಡಿದರು. ಸಂಸ್ಥೆಯ ಉಪನ್ಯಾಸಕರಾದ ದೀಪಕ್, ಶ್ರೀಮತಿ ಸುಕನ್ಯಾ, ಕು.ಅಭಿನಯ ನೇತೃತ್ವ ವಹಿಸಿದ್ದು ಉಪಪ್ರಾಚಾರ್ಯರಾದ ಪ್ರಕಾಶ್ ಭಟ್ ಸಂಘಟಿಸಿದ್ದರು.












